ನವದೆಹಲಿ: ಪಂಜಾಬ್ ಗಡಿ ಪ್ರವೇಶಿಸುತ್ತಿದ್ದ ಪಾಕ್ ಒಳನುಸುಳುಕೋರನನ್ನು ಇಂದು ಬೆಳಗ್ಗೆ ಗಡಿ ಭದ್ರತಾ ಪಡೆ (ಬಿಎಸ್ಎಫ್) ಹೊಡೆದುರುಳಿಸಿದೆ ಎಂದು ಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಂಕಿತನು ಇಂದು ಬೆಳಗ್ಗೆ 8.30 ರ ಸುಮಾರಿಗೆ ಪಂಜಾಬ್ ಗಡಿ ಪ್ರವೇಶಿಸಲು ಯತ್ನಿಸುತ್ತಿದ್ದನ್ನು ಗಮನಿಸಿದ ಬಿಎಸ್ಎಫ್ ಪಡೆ ಎಚ್ಚೆತ್ತುಕೊಂಡಿದ್ದು, ಗುಂಡಿನ ದಾಳಿ ನಡೆಸಿದರ ಪರಿಣಾಮ ಆತ ಅಲ್ಲೇ ಸಾವಿಗೀಡಾಗಿದ್ದಾನೆ.
ಗುರುದಾಸ್ಪುರ ಸೆಕ್ಟರ್ನ ಬಾರ್ಡರ್ ಔಟ್ಪೋಸ್ಟ್ ಚನ್ನಾ ಅಡಿಯಲ್ಲಿ ಬಿಎಸ್ಎಫ್ ಪಡೆಗಳು ಬೆಳಿಗ್ಗೆ 8.30 ರ ಸುಮಾರಿಗೆ ಒಳನುಗ್ಗುವವರ ಶಂಕಿತ ಚಲನವಲನವನ್ನು ಗಮನಿಸಿದ್ದು, ಶಂಕಿತನು ಬೇಲಿ ಕಡೆಗೆ ಚಲಿಸುತ್ತಿದ್ದಾಗ ಬಿಎಸ್ಎಫ್ ಪಡೆ ಗುಂಡು ಹಾರಿಸಿದೆ ಎಂದು ತಿಳಿದುಬಂದಿದೆ.
Punjab | Today at about 8.30 am, BSF troops of BOP Channa, Gurdaspur Sector observed suspected movement of an armed Pak intruder ahead of BS Fence who was approaching BS Fence from Pak side. He was challenged & neutralised by BSF troops. Extensive search of the area underway: BSF pic.twitter.com/iATxF5Tx6R
— ANI (@ANI) January 3, 2023
ಪಾಕಿಸ್ತಾನಿ ದುಷ್ಕರ್ಮಿಯ ಶವದ ಬಳಿ ಬಂದೂಕು ಪತ್ತೆಯಾಗಿದ್ದು, ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವ್ಯಾಪಕ ಶೋಧ ಮುಂದುವರೆದಿದೆ.
BIGG NEWS : ಅಮೃತ ಜೀವನ ಯೋಜನೆಯಡಿ ಹಸು-ಎಮ್ಮೆ ಘಟಕ ಸೌಲಭ್ಯಕ್ಕೆ ಅರ್ಜಿ ಆಹ್ವಾನ