ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ವಂದೇ ಭಾರತ್ ಎಕ್ಸ್ಪ್ರೆಸ್(Vande Bharat Express) ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಈ ರೈಲು ಸಂಚಾರ ಆರಂಭಿಸಿದ ಕೇವಲ ಎರಡೇ ದಿನದಲ್ಲಿ ಇದರ ಮೇಲೆ ಅಪರಿಚಿತ ದುಷ್ಕರ್ಮಿಗಳು ಕಲ್ಲು ಎಸೆದಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗದಿದ್ದರೂ, ಕಲ್ಲಿನಿಂದ ಹೊಡೆದ ರಭಸಕ್ಕೆ ಕೋಚ್ ಸಂಖ್ಯೆ ಸಿ-13 ರ ಬಾಗಿಲಿನ ಗಾಜು ಒಡೆದಿದೆ. ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ರೈಲ್ವೇ ಕಾಯ್ದೆಯ ಸೆಕ್ಷನ್ 154 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
West Bengal | Stones pelted at Vande Bharat Express connecting Howrah to New Jalpaiguri, 4 days after its launch. The incident took place near Malda station. pic.twitter.com/Nm3XOmffpR
— ANI (@ANI) January 3, 2023
ಸೋಮವಾರ ಸಂಜೆ 5:50 ರ ಸುಮಾರಿಗೆ ಕುಮಾರ್ಗಂಜ್ನಲ್ಲಿ ನ್ಯೂ ಜಲ್ಪೈಗುರಿ-ಹೌರಾ ವಂದೇ ಭಾರತ್ ಎಕ್ಸ್ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಒಂದು ಮುಖ್ಯ ಬಾಗಿಲಿನ ಗಾಜು ಹೊಡೆದಿದೆ. ಯಾರಿಗೂ ಗಾಯಗಳಾಗಿಲ್ಲ. ವೇಳಾಪಟ್ಟಿಯಲ್ಲಿ ಯಾವುದೇ ವಿಳಂಬವಾಗಿಲ್ಲ’ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING NEWS: ಬಂಗಾಳಿಯ ಖ್ಯಾತ ಗಾಯಕಿ ʻಸುಮಿತ್ರಾ ಸೇನ್ʼ ಇನ್ನಿಲ್ಲ | Sumitra Sen passes away
BREAKING NEWS: ಬಂಗಾಳಿಯ ಖ್ಯಾತ ಗಾಯಕಿ ʻಸುಮಿತ್ರಾ ಸೇನ್ʼ ಇನ್ನಿಲ್ಲ | Sumitra Sen passes away