ನವದೆಹಲಿ: ಬಂಗಾಳದ ಖ್ಯಾತ ಗಾಯಕಿ 89 ವರ್ಷದ ಸುಮಿತ್ರಾ ಸೇನ್ (Sumitra Sen) ಇಂದು ಕೋಲ್ಕತ್ತಾದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಈ ಕುರಿತು ಅವರ ಪುತ್ರಿ ರವೀಂದ್ರ ಸಂಗೀತ ಕಲಾವಿದೆ ಶ್ರಾವಣಿ ಸೇನ್ ಫೇಸ್ ಬುಕ್ನಲ್ಲಿ ಪೋಸ್ಟ್ ಮಾಡುವ ಮೂಲಕ ʻಅಮ್ಮ ಇಂದು ಇಹಲೋಕ ತ್ಯಜಿಸಿದ್ದಾರೆʼ ಎಂದು ಮಾಹಿತಿ ನೀಡಿದ್ದಾರೆ.
ಸುಮಿತ್ರಾ ಸೇನ್ ಅವರು ಬ್ರಾಂಕೋಪ್ನ್ಯೂಮೋನಿಯಾದಿಂದ ಬಳಲುತ್ತಿದ್ದರು. ಅನಾರೋಗ್ಯದ ಕಾರಣದಿಂದ ಡಿಸೆಂಬರ್ 20 ರಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಸ್ಥಿತಿ ಹದಗೆಟ್ಟ ಪರಿಣಾಮ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ, ಅವರನ್ನು ಕುಟುಂಬಸ್ಥರು ಮನೆಗೆ ಕರೆತಂದಿದ್ದರು. ಸುಮಿತ್ರಾ ಇಂದು ತಮ್ಮ ನಿವಾಸದಲ್ಲಿ ನಿಧನರಾದರು.
ಮೇಘ್ ಬೋಲೆ ಛೇ ಜಬೋ ಜಬೋ, ಭಾರಾ ಥಕ್ ಸ್ಮೃತಿ ಸುಧೈ, ತೋಮರ್ ಅವರ ಕೆನೋ ಐಸಿ, ದುಖ್ ಜಡಿ ನಾ ಪಬೆ ತೊ ಅವರ ಕೆಲವು ಜನಪ್ರಿಯ ಹಾಡುಗಳು. ಸೇನ್ ಅವರ ಮಧುರ ಧ್ವನಿಗೆ ಅನೇಕ ಅಭಿಮಾನಿಗಳು ಇದ್ದಾರೆ. ಅವರ ಅಗಲಿಕೆಗೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.
BREAKING NEWS: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನವನ್ನ ಶಾಂತಿ, ಸಂಯಮದಿಂದ ಪಡೆಯಿರಿ : ಸಿಎಂ ಬೊಮ್ಮಾಯಿ ಮನವಿ
BREAKING NEWS: ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನವನ್ನ ಶಾಂತಿ, ಸಂಯಮದಿಂದ ಪಡೆಯಿರಿ : ಸಿಎಂ ಬೊಮ್ಮಾಯಿ ಮನವಿ