ವಿಜಯಪುರ : ಜ್ಞಾನಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದಾರೆ. ಶ್ರೀಗಳ ಅಗಲಿಕೆಯಿಂದ ಬೇಸರಗೊಂಡ ನಗರದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ.
BREAKING NEWS: ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಹೊಳೆ ಆಲೂರಿನಲ್ಲಿ ಅಂಧ, ಬುದ್ಧಿಮಾಂದ್ಯ ಮಕ್ಕಳಿಂದ ಸಂತಾಪ
ಮಧ್ಯಾಹ್ನ 3 ಗಂಟೆವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂಜಾನೆಯಿಂದಲೇ ಸಾವಿರಾರು ಭಕ್ತರು ಆಗಮಿಸಿ ಅಂತಿಮ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಶ್ರೀಗಳ ಅಗಲಿಕೆಗೆ ವಿಜಯಪುರ ನಗರಾದ್ಯಂತ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳು ಬಂದ್ ಸಂತಾಪ ಸೂಚಿಸಿದ್ದಾರೆ. ಇಡೀ ವಿಜಯಪುರ ಜಿಲ್ಲೆಯೇ ನಿರಾವ ಮೌನಾಚರಣೆ ಮೂಲಕ ಅಂತಿಮನಮನ ಸಲ್ಲಿಸಿದ್ದಾರೆ. ಅಲ್ಲದೆ ಅಂತಿಮ ದರ್ಶನದಲ್ಲಿ ಭಾಗಿಯಾಗಲು 70ಕ್ಕೂ ಹೆಚ್ಚು ಅಂಧ, ಬುದ್ಧಿಮಾಂದ್ಯ ಮಕ್ಕಳು ವಿಜಯಪುರಕ್ಕೆ ಹೊರಟಿದ್ದಾರೆ.
BREAKING NEWS: ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಹೊಳೆ ಆಲೂರಿನಲ್ಲಿ ಅಂಧ, ಬುದ್ಧಿಮಾಂದ್ಯ ಮಕ್ಕಳಿಂದ ಸಂತಾಪ
ರಾಜ್ಯ ಅಷ್ಟೇ ಅಲ್ಲದೇ ಹೊರ ರಾಜ್ಯಗಳಿಂದಲೂ ಸ್ವಾಮೀಜಿ ಅಂತಿಮ ದರ್ಶನಕ್ಕಾಗಿ ಭಕ್ತರು ಬರುತ್ತಿದ್ದಾರೆ. ಸಿದ್ದೇಶ್ವರಶ್ರೀ ಸರ್ವಧರ್ಮ ಸಂತರಾಗಿದ್ದರು, ಯಾವತ್ತು ಜಾತಿ, ಧರ್ಮದ ಬೇಧ ಮಾಡಲಿಲ್ಲ, ಎಲ್ಲ ಮನುಷ್ಯರು ಒಂದೇ ಎನ್ನುತ್ತಿದ್ದರು. ಈ ಹಿಂದೆ ಸ್ವಾಮೀಜಿ ಪ್ರವಚನಕ್ಕೆ ಹೋಗಿದ್ದೇವು ಎಂದು ಸ್ವಾಮೀಜಿಯನ್ನ ನೆನೆಯುತ್ತಾ ಮುಸ್ಲಿಂ ದಂಪತಿಗಳು. ಕಣ್ಣೀರು ಹಾಕುತ್ತಿದ್ದಾರೆ ಇಂತಹ ಪ್ರಸಿದ್ದಿ ಪಡೆದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳನ್ನು ಕಳೆದುಕೊಂಡ ಭಕ್ತರು ಬೇಸರಪಡುತ್ತಿದ್ದಾರೆ.
BREAKING NEWS: ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಹೊಳೆ ಆಲೂರಿನಲ್ಲಿ ಅಂಧ, ಬುದ್ಧಿಮಾಂದ್ಯ ಮಕ್ಕಳಿಂದ ಸಂತಾಪ
ಇನ್ನು ಮುಂಜಾನೆಯಿಂದಲೂ ಸಿದ್ದೇಶ್ವರ ಶ್ರೀಗಳ ದರ್ಶನ ಪಡೆಯಲು ಬರುತ್ತಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ಸಾಗರೋಪಾದಿಯಲ್ಲಿ ಬೆಳಂಬೆಳಗ್ಗೆ ಭಕ್ತರ ದಂಡು ಹರಿದು ಬರುತ್ತಿದೆ. ನಸುಕಿನ ಜಾವವೇ ಅಂತಿಮ ದರ್ಶನಕ್ಕೆ ಭಕ್ತಾದಿಗಳು ಹಾಕಿದ ಕಾರಿಡಾರ್ ಸಂಪೂರ್ಣ ಭರ್ತಿಯಾಗಿದೆ.
ಬಿಜ್ಜರಗಿ ಗ್ರಾಮದಿಂದ ಹೊರಡಲು ಬಸ್, ಕ್ರೂಸರ್ಗಳ ವ್ಯವಸ್ಥೆ ಮಾಡಲಾಗಿದೆ. ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಕೂಡ ಮಾಡಲಾಗಿದೆ.
BREAKING NEWS: ಸಿದ್ದೇಶ್ವರ ಶ್ರೀಗಳ ಅಗಲಿಕೆಗೆ ಹೊಳೆ ಆಲೂರಿನಲ್ಲಿ ಅಂಧ, ಬುದ್ಧಿಮಾಂದ್ಯ ಮಕ್ಕಳಿಂದ ಸಂತಾಪ