ವಿಜಯಪುರ : ಅನಾರೋಗ್ಯದಿಂದ ಬಳಲುತ್ತಿದ್ದ ಅಪರೂಪದ ಸಂತ, ನಡೆದಾಡುವ ದೇವರು, ಖ್ಯಾತ ಪ್ರವಚನಕಾರ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ (82) ನಿನ್ನೆ ಸಂಜೆ 6.05 ಕ್ಕೆ ಲಿಂಗೈಕ್ಯರಾಗಿದ್ದು, ಸಿದ್ದೇಶ್ವರ ಶ್ರೀಗಳ ಆಶಯದಂತೆ ಇಂದು ಸಂಜೆ ಜ್ಞಾನಯೋಗಾಶ್ರಮದ ಆವರಣದಲ್ಲೇ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ.
ಸಿದ್ಧೇಶ್ವರ ಸ್ವಾಮೀಜಿಗಳು ಆಪ್ತರೊಂದಿಗೆ ಚರ್ಚೆ ನಡೆಸಿ ವಿಲ್ ಬರೆದಿಟ್ಟಿದ್ದಾರೆ. ಕಾಯವನ್ನು ಮಣ್ಣು ಮಾಡುವಂತಿಲ್ಲ, ಅಗ್ನಿ ಸ್ಪರ್ಶ ಮಾಡಬೇಕು. ಚಿತಾಭಸ್ಮವನ್ನು ನದಿ ಅಥವಾ ಸಮುದ್ರದಲ್ಲಿ ವಿಸರ್ಜಿಸಿ ಬೇಕು. ಶ್ರಾದ್ಧ ಕರ್ಮ ಕರ್ಮಗಳನ್ನು ಮಾಡುವಂತಿಲ್ಲ. ಯಾವುದೇ ರೀತಿಯ ಸ್ಮಾರಕಗಳನ್ನು ನಿರ್ಮಿಸಬೇಡಿ ಅಂತ ವಿಲ್ ನಲ್ಲಿ ತಿಳಿಸಿದ್ದಾರೆ.
ಸಿದ್ದೇಶ್ವರ ಶ್ರೀಗಳ `ಅಂತಿಮ ಅಭಿವಂದನ ಪತ್ರ’