ಅಯೋಧ್ಯೆ: ಅಯೋಧ್ಯೆಯ ರಾಮಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಪತ್ರವೊಂದನ್ನು ಬರೆದಿದ್ದು, ʻತಮ್ಮ ಆಶೀರ್ವಾದʼವನ್ನು ತಿಳಿಸಿದ್ದಾರೆ.
ʻದೇಶಕ್ಕಾಗಿ ನೀವು ಮಾಡುವ ಯಾವುದೇ ಕೆಲಸವು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ನನ್ನ ಆಶೀರ್ವಾದ ನಿಮ್ಮ ಮೇಲಿದೆ. ರಾಮನ ಆಶೀರ್ವಾದ ನಿಮ್ಮೊಂದಿಗೆ (ರಾಹುಲ್ ಗಾಂಧಿ) ಇರಲಿʼ ಎಂದು ದಾಸ್ ಪತ್ರದಲ್ಲಿ ಬರೆದು ಅದನ್ನು ಯುವ ಕಾಂಗ್ರೆಸ್ ನಾಯಕ ಗೌರವ್ ತಿವಾರಿಗೆ ಹಸ್ತಾಂತರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಹನುಮಾನ್ ಗರ್ಹಿ ಅರ್ಚಕ ರಾಜು ದಾಸ್, ʻಇದು ಆಚಾರ್ಯ ಸತ್ಯೇಂದ್ರ ದಾಸ್ ಅವರ ವೈಯಕ್ತಿಕ ಅಭಿಪ್ರಾಯ. ಸತ್ಯೇಂದ್ರ ದಾಸ್ ಅವರ ಮಾತನ್ನು ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿಯಾಗಿದೆʼ ಎಂದು ಹೇಳಿದ್ದಾರೆ.
ಇಂದು ‘ಭಾರತ್ ಜೋಡೋ ಯಾತ್ರೆ’ ಉತ್ತರ ಪ್ರದೇಶವನ್ನು ಪ್ರವೇಶಿಸಲಿದೆ.
WATCH VIDEO: ʻಅಡುಗೆ ಅನಿಲʼವನ್ನು ಪ್ಲಾಸ್ಟಿಕ್ ಬಲೂನ್ಗಳಲ್ಲಿ ಹೊತ್ತೊಯ್ಯುತ್ತಿರುವ ಪಾಕಿಸ್ತಾನಿಗಳು… ವಿಡಿಯೋ ವೈರಲ್
ಕೋವಿಡ್ನಿಂದ ಪತ್ನಿ ಸಾವು: ಮನೆಯಲ್ಲೇ ಅರ್ಧಾಂಗಿಯ ಸಿಲಿಕೋನ್ ಪ್ರತಿಮೆ ಸ್ಥಾಪಿಸಿದ ಪತಿ!
WATCH VIDEO: ʻಅಡುಗೆ ಅನಿಲʼವನ್ನು ಪ್ಲಾಸ್ಟಿಕ್ ಬಲೂನ್ಗಳಲ್ಲಿ ಹೊತ್ತೊಯ್ಯುತ್ತಿರುವ ಪಾಕಿಸ್ತಾನಿಗಳು… ವಿಡಿಯೋ ವೈರಲ್
ಕೋವಿಡ್ನಿಂದ ಪತ್ನಿ ಸಾವು: ಮನೆಯಲ್ಲೇ ಅರ್ಧಾಂಗಿಯ ಸಿಲಿಕೋನ್ ಪ್ರತಿಮೆ ಸ್ಥಾಪಿಸಿದ ಪತಿ!