ಧಾರವಾಡ : ಧಾರವಾಡದಲ್ಲಿ ಜವಳಿ ಪಾರ್ಕ ನಿರ್ಮಾಣಕ್ಕೆ ತಿರ್ಮಾನಿಸಿದ್ದು, ಶೀಘ್ರದಲ್ಲೆ ಅನುಷ್ಠಾನಗೊಳಿಸಲಾಗುವುದೆಂದು ಕೈಮಗ್ಗ ಮತ್ತು ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಕೆಸಿ ಪಾರ್ಕ ಹತ್ತಿರದ ಸಿಂದೂರ ಭವನದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಆರಂಭಗೊಂಡ ವಿಶೇಷ ಕೈಮಗ್ಗ ಮೇಳ “ವಸ್ತ್ರ ಭಂಡಾರ”ವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ ಈಗಿನ ಸರ್ಕಾರವು ನೇಕಾರರಿಗೆ ಹಾಗೂ ನೇಕಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಯೋಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನೇಕಾರರ ಆರ್ಥಿಕ ಅಭಿವೃದ್ಧಿಗೆ 2 ಲಕ್ಷದವರೆಗೆ ಬಡ್ಡಿರಹಿತ ಸಾಲವನ್ನು ನೀಡಲಾಗುತ್ತಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ ಎಂದರು.
ಇಂತಹ ಕೈಮಗ್ಗ ಮೇಳಗಳು ಬೆಂಗಳೂರು ಹೊರತಾಗಿ ಬೆರೇ ಜಿಲ್ಲೆಗಳಲ್ಲಿ ಮಾಡುವುದರಿಂದ ಅನೇಕ ಕೈಮಗ್ಗ ನೇಕಾರರಿಗೆ ಉಪಯೋಗವಾಗಲಿದೆ. ಇಂತಹ ಮೇಳಗಳಿಂದ ನೇಕಾರರು ತಮ್ಮ ವಿಶೀಷ್ಟ ವೈವಿದ್ಯಮಯ ಉತ್ಪನ್ನಗಳೊಂದಿಗೆ ಗ್ರಾಹಕರೊಂಧಿಗೆ ನೇರ ಸಂಪರ್ಕಕ್ಕೆ ಬರುವುದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ತಮ್ಮನ್ನು ಆರ್ಥಿಕವಾಗಿ ಉನ್ನತಿಕರಿಸಿಕೊಳ್ಳುವ ಅವಕಾಶ ದೊರೆಯುತ್ತದೆ. ಧಾರವಾಡದಲ್ಲಿ ಜರಗುತ್ತಿರುವ ಮೇಳದಲ್ಲಿ ಒಟ್ಟು ರಾಜ್ಯದ ವಿವಿದೆಡೆಯಿಂದ 46 ಹಾಗೂ ಹೊರ ರಾಜ್ಯದ 14 ಕೈಮಗ್ಗ ನೇಕಾರ ಸಂಘಗಳು ತಮ್ಮ ವೈವಿದ್ಯಮಯ ಉತ್ಪನ್ನಗಳೊಂದಿಗೆ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
14 ದಿನಗಳ ವರೆಗೆ ನಡೆಯುವ ಈ ಮೇಳದಲ್ಲಿ ಧಾರವಾಡದ ಗ್ರಾಹಕರು ಈ ಕೈಮಗ್ಗ ಉತ್ಪನ್ನಗಳನ್ನು ಖರೀದಿಸಬಹುದಾಗಿದೆ. ಒಟ್ಟು 60 ವಿವಿಧ ಮಳಿಗೆಗಳನ್ನು ಸಚಿವರು ವಿಕ್ಷಿಸಿದರು.
ರಾಜ್ಯ ಸರ್ಕಾರಿ ಕೈಮಗ್ಗ ನೇಕಾರರ ಮಹಾ ಮಂಡಳದ ಅಧ್ಯಕ್ಷರಾಧ ಬಿ.ಜೆ.ಗಣೇಶ, ಜಂಟಿ ನಿರ್ದೇಶಕರಾದ ಎನ.ಟಿ.ನೆಗಳೂರು, ಧಾರವಾಡದ ಉಪನಿರ್ದೇಶಕರಾದ ಸೈಯದ್ ನಯಿಮ್ ಅಹ್ಮದ ಹಾಗೂ ಅಶೋಕ ಸುರಪುರ ಉಪಸ್ಥಿತರಿದ್ದರು.