ಬೆಂಗಳೂರು : ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹುದ್ದೆಗೆ ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ದಿನಾಂಕ:09-01-2023 ರ ಸೋಮವಾರ ಬೆಳಗ್ಗೆ 11-30 ಗಂಟೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಎಲ್ಲಾ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ವಿಡಿಯೋ ಕಾನ್ಸರನ್ ಮೂಲಕ ಸ್ಥಳನಿಯುಕ್ತಿ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ಉಪನ್ಯಾಸಕರ ಹುದ್ದೆಗಳ ಮಾಹಿತಿಯನ್ನು ಇಲಾಖಾ ಜಾಲತಾಣ www.pue.karnataka.gov.in ಈ ಲಿಂಕ್ನಲ್ಲಿ ಪ್ರಕಟಿಸಲಾಗುವುದು, ಅಭ್ಯರ್ಥಿಗಳು ಸ್ಥಳನಿಯುಕ್ತಿ ಕೌನ್ಸೆಲಿಂಗ್ ಸಮಯದಲ್ಲಿ ಈ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ:
- ಅಭ್ಯರ್ಥಿಗಳು ದಿನಾಂಕ: 09-01-2023 ರಂದು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರ ಕಚೇರಿಗೆ ಒಂದು ಗಂಟೆ ಮುಂಚಿತವಾಗಿ ಹಾಜರಾಗಿ ಜಿಲ್ಲಾ ಉಪನಿರ್ದೇಶಕರಲ್ಲಿ ವರದಿ ಮಾಡಿಕೊಳ್ಳುವುದು.
- ಆಯ್ಕೆಗೊಂಡ ಎಲ್ಲಾ ಅರ್ಹ ಅಭ್ಯರ್ಥಿಗಳಿಗೆ (ನೈಜತೆ ಪ್ರಮಾಣ ಪತ್ರ ಸ್ವೀಕೃತವಾದ ಅಥವಾ ಸ್ವೀಕೃತವಾಗದೇ ಇರುವ) ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು.
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಪ್ರಕಟಿಸಲಾದ ಅಂತಿಮ ಆಯ್ಕೆಪಟ್ಟಿಯಂತೆ ಜೇಷ್ಠತೆಯ ಅನುಸಾರ ಕಲ್ಪಿಸಲಾಗುವುದು, ಸವರಿ ಇರುವುದಿಲ್ಲ.
4 ಕೌನ್ಸೆಲಿಂಗ್ ಸ್ಥಳ ಆಯ್ಕೆ ಪ್ರಕ್ರಿಯೆಯಲ್ಲಿ ಆದ್ಯತೆ ಯಾವುದೇ ಇತರ ಆದ್ಯತೆಗಳಿಗೆ ಅವಕಾಶ ಜೇಷ್ಠತೆಯನ್ನು ಹೊರತುಪಡಿಸಿ
- ಹಾಜರಾಗುವ ಸಂದರ್ಭದಲ್ಲಿ, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಾಖಲೆ ಪರಿಶೀಲನೆ ವೇಳೆ ನೀಡಲಾಗಿದ್ದ ಸ್ವೀಕೃತಿ ಪತ್ರದ ಪ್ರತಿ ಮತ್ತು ಆಯ್ಕೆಪಟ್ಟಿ ಹಾಗೂ ಚೀಟಿಯನ್ನು(ಆಧಾ/ಮತದಾರರ ಗುರುತಿನ ಚೀಟಿಗೆ ಹೊಂದಿರತಕ್ಕದ್ದು.
- ಅಭ್ಯರ್ಥಿಗಳು ವಾಸಸ್ಥಳಕ್ಕೆ ಹತ್ತಿರದ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಸ್ಥಳನಿಯುಕ್ತಿ ಕೌನ್ಸೆಲಿಂಗ್ ಹಾಜರಾಗತಕ್ಕದ್ದು, ಆದರೆ, ಯಾವುದೇ ಕಾರಣಕ್ಕೂ ಸ್ಥಳನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಕೇಂದ್ರ ಕಚೇರಿಯಲ್ಲಿ ಹಾಜರಾಗತಕ್ಕದ್ದಲ್ಲ.
- ಅಭ್ಯರ್ಥಿಗಳು ಕೌನ್ಸೆಲಿಂಗ್ಗೆ ಹಾಜರಾಗುವ ಸಂದರ್ಭದಲ್ಲಿ ಕೌನ್ಸೆಲಿಂಗ್ ಕೊಠಡಿಯಲ್ಲಿ ಪೋಷಕರನ್ನಾಗಲೀ ಅಥವಾ ಇತರರನ್ನಾಗಲೀ ಕರತರತಕ್ಕದ್ದಲ್ಲ,
- ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಭ್ಯರ್ಥಿಯ ಪರವಾಗಿ ಯಾವುದೇ ಕಾರಣಕ್ಕೂ ಬೇರೊಬ್ಬ ವ್ಯಕ್ತಿಗೆ ಹಾಜರಾಗಲು ಅವಕಾಶ ಇರುವುದಿಲ್ಲ.
- ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಕೌನ್ಸೆಲಿಂಗ್ನಲ್ಲಿ ಪ್ರದೇಶವಾರು (ಕಲಾಣ ಕರ್ನಾಟಕ ಹಾಗೂ ಕಲಾಣ ಕರ್ನಾಟಕೇತರ) ಜಿಲ್ಲೆಯಗಳ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿಯಿರುವ ‘ಸಿ’ ವಲಯದ ವಿವಿಧ ವಿಷಯಗಳ ಉಪನ್ಯಾಸಕರ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ (‘ಸಿ’ ವಲಯದಲ್ಲಿ ಹುದ್ದೆಗಳು ಲಭ್ಯವಿಲ್ಲದಿದ್ದಲ್ಲಿ, ‘ಬಿ’ವಲಯ, ‘ಬಿ’ ವಲಯದಲ್ಲಿ ಹುದ್ದೆ ಖಾಲಿಯಿಲ್ಲದಿದ್ದಲ್ಲಿ ‘ಎ’ ವಲಯ)
- ಸ್ಥಳನಿಯುಕ್ತಿ ಕೌನ್ಸಲಿಂಗ್ ಸಂದರ್ಭದಲ್ಲಿ ಇಲಾಖಾ ವತಿಯಿಂದ ನೀಡಲಾಗುವ ಒಪ್ಪಿಗೆ ಪತ್ರವನ್ನು ದ್ವಿಪ್ರತಿಯಲ್ಲಿ ಪಡೆದು, ಆಯ್ಕೆ ಮಾಡಿಕೊಳ್ಳುವ ಸ್ಥಳವನ್ನು ಭರ್ತಿ ಮಾಡಿ ಜಿಲ್ಲಾ ಉಪನಿರ್ದೇಶಕರಿಂದ ಸಹಿ ಪಡೆದು, ಒಂದು ಸ್ವೀಕೃತಿ ಪ್ರತಿಯನ್ನು ಪಡೆಯತಕ್ಕದ್ದು.
- ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಸಂದರ್ಭದಲ್ಲಿ ಒಮ್ಮೆ ಆಯ್ಕೆ ಮಾಡಿಕೊಂಡ ಸ್ಥಳವನ್ನು ಯಾವುದೇ ಕಾರಣಕ್ಕೂ ಬದಲಾಯಿಸಲು ಅವಕಾಶ ಇರುವುದಿಲ್ಲ.
- ಇಲಾಖೆಯು ನಿಗದಿಪಡಿಸಿದ ಮಾನದಂಡಗಳನ್ವಯ ಕೌನ್ಸಲಿಂಗ್ ಪ್ರಕ್ರಿಯೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳುವುದು ಯಾವುದೇ ಕಾರಣಕ್ಕೂ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಅವಕಾಶ ಇರುವುದಿಲ್ಲ.
- ಕೌನ್ಸೆಲಿಂಗ್ ನಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳ ಪೈಕಿ ಎಲ್ಲಾ ಅಗತ್ಯ ದಾಖಲಾತಿಗಳು (ನೈಜ ಪ್ರಮಾಣ ಪತ್ರಗಳನ್ನೊಳಗೊಂಡಂತೆ) ಸ್ವೀಕೃತವಾದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ಹೊರಡಿಸಲಾಗುವುದು.