ಶಿವಮೊಗ್ಗ : ರಸ್ತೆ ಬದಿ ನಿಲ್ಲಿಸಿದ್ದ ಕಾರಿನಲ್ಲಿ ಮೊಬೈಲ್ ಸ್ಪೋಟಗೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ.
ನಗರದ ದುರ್ಗಿಗುಡಿ ಸರ್ಕಾರಿ ಶಾಲೆ ಬಳಿ ಸ್ಪೋಟ ಸಂಭವಿಸಿದ್ದು, ರಿಪ್ಪನ್ ಪೇಟೆ ಮೂಲದ ಕೃಷ್ಣ ಎಂಬುವವರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಹೋಗಿದ್ದರು. ಈ ವೇಳೆ ಕಾರಿನ ಸೀಟ್ ನಲ್ಲಿ ಕವರ್ ನಲ್ಲಿ ಇಟ್ಟಿದ್ದ ಮೊಬೈಲ್ ಸ್ಪೋಟವಾಗಿದೆ. ಇದರಿಂದ ಕಾರಿನ ಸೀಟಿಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ದೊಡ್ಡ ದುರಂತ ತಪ್ಪಿಸಿದ್ದಾರೆ.
ಮೊಬೈಲ್ ಸ್ಪೋಟಗೊಳ್ಳಲು ಕಾರಣ ಏನೆಂಬುದು ತಿಳಿದು ಬಂದಿಲ್ಲ, ಅದೃಷ್ಟವಶಾತ್ ಕಾರಿನ ಚಾಲಕ ಕೃಷ್ಣ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
‘ಪಕ್ಕದ್ಮನೆಯಲ್ಲಿ ಗಂಡು ಹುಟ್ಟಿದಾಗ ಪೇಡೆ ಹಂಚಿದ್ರೆ ಉಪಯೋಗ ಇಲ್ಲ’ : ಕಾಂಗ್ರೆಸ್ ಗೆ ಪ್ರಲ್ಹಾದ್ ಜೋಶಿ ಟಾಂಗ್