ಮೈಸೂರು : ಮೈಸೂರಿನಲ್ಲೂ ಮದ್ಯ ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದು, ಭರ್ಜರಿ ಎಣ್ಣೆ ಸೋಲ್ಡ್ ಸೌಟ್ ಆಗಿದೆ.
ಹೌದು. ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಭರ್ಜರಿ ಮದ್ಯ ಮಾರಾಟವಾಗಿದ್ದು, ಡಿ.31 ರಂದು 25 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ‘ಮದ್ಯ’ ಮಾರಾಟವಾಗಿದೆ.
ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಹೊಸ ವರ್ಷದ ಸಂಭ್ರಮಾಚರಣೆಗೆ ಡಿಸೆಂಬರ್ 31ರಂದು 25 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ, ಇಯರ್ ಎಂಡ್ ಹಿನ್ನೆಲೆ ರಾಜ್ಯದಲ್ಲಿ ಭರ್ಜರಿ ಮದ್ಯ ಮಾರಾಟವಾಗಿತ್ತು, ಅಬಕಾರಿ ಇಲಾಖೆಗೆ ಭಾರೀ ಆದಾಯ ತಂದುಕೊಟ್ಟಿದೆ. ಡಿಸೆಂಬರ್ 27 ರಂದು 3.57 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 28 ರಂದು 2.31 ಲಕ್ಷ ಲೀಟರ್ ಮದ್ಯ , 1.67 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಮದ್ಯ, 1.93 ಲಕ್ಷ ಲೀಟರ್ ಬಿಯರ್ , ಡಿಸೆಂಬರ್ 30 ರಂದು .93 ಲಕ್ಷ ಲೀಟರ್ ಮದ್ಯ, 2.59 ಲಕ್ಷ ಲೀಟರ್ ಬಿಯರ್ , ಇನ್ನೂ 2022 ರ ಕೊನೆಯ ದಿನವಾದ ಡಿಸೆಂಬರ್ 31 ರಂದು 3 ಲಕ್ಷ ಲೀಟರ್ ಮದ್ಯ ಹಾಗೂ 2.41 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ನಾನು ರಾಜಕೀಯ ಕ್ಷೇತ್ರಕ್ಕೆ ಬರಲು ಜನಾರ್ಧನ ರೆಡ್ಡಿ ಕಾರಣ, ಅವರೇ ನನ್ನನ್ನು ಕರೆತಂದಿದ್ದು- ಸಚಿವ ಆನಂದ್ ಸಿಂಗ್