ಚಿತ್ರದುರ್ಗ: ಮುರುಘಾಮಠಕ್ಕೆ ( Murugha Matt ) ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತಾಧಿಕಾರಿಯನ್ನು ನೇಮಿಸಿದ್ದನ್ನು ಪ್ರಶ್ನಿಸಿ, ರಿಟ್ ಅರ್ಜಿಯನ್ನು ಸಲ್ಲಿಸಲಾಗಿದೆ. ಅಲ್ಲದೇ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ನೇಮಕವನ್ನು ರದ್ದುಗೊಳಿಸುವಂತೆ ಕೋರಲಾಗಿತ್ತು.
ಇದೀಗ ಇಂದು ಲಿಖಿತ ವಾದಾಂಶದಲ್ಲಿ ಹೊಸ ಅಂಶ ಪ್ರಸ್ತಾಪ ಹಿನ್ನೆಲೆ ಮತ್ತೆ ವಿಚಾರಣೆ ನಡೆಸಲು ನ್ಯಾ.ಕೃಷ್ಣ ಎಸ್.ದೀಕ್ಷಿತ್ ಪೀಠ ನಿರ್ಧರಿಸಿದೆ.
ಈ ಬಗ್ಗೆ ಹೈಕೋರ್ಟ್ ಮತ್ತೆ ವಿಚಾರಣೆಯನ್ನು ಮುಂದೂಡಿದ್ದು, ಜನವರಿ 12ಕ್ಕೆ ನಿಗದಿಪಡಿಸಿದೆ. ಹೈಕೋರ್ಟ್ ಹಿಂದೂ ಕಾನೂನಿನಡಿ ಮಠಾಧಿಪತಿಗಳ ಅಧಿಕಾರ ವ್ಯಾಪ್ತಿ ಹಾಗೂ ಇತ್ಯಾದಿಗಳ ಬಗ್ಗೆ ವಿವರವಾದ ಮಾಹಿತಿ ನೀಡಲು ಸೂಚನೆ ನೀಡಿದೆ.
ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ನೇಮಕ ಮಾಡಲಾಗಿತ್ತು. ಈ ನೇಮಕ ಪ್ರಶ್ನಿಸಿ ಚಿತ್ರದುರ್ಗದ ಡಿಎಸ್ ಮಲ್ಲಿಕಾರ್ಜುನ ಮತ್ತಿತ್ತರರು ರಿಟ್ ಅರ್ಜಿಯನ್ನು ಸಲ್ಲಿಸಿದ್ದರು. ರಿಟ್ ಅರ್ಜಿಯಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್ ವಸ್ತ್ರದ್ ನೇಮಕ ರದ್ದುಪಡಿಸಬೇಕು. ಈಗಾಗಲೇ ಡಾ.ಶಿವಮೂರ್ತಿ ಮುರುಘಾ ಶರಣರು ಶಿಕ್ಷಣ ಸಂಸ್ಥೆಗಳಿಗೆ ನಿವೃತ್ತ ನ್ಯಾಯಾಧೀಶರಿಗೆ ಜಿಪಿಎ ನೀಡಿದ್ದಾರೆ. ಮಠದ ವ್ಯವಹಾರಗಳಿಗೆ ಬಸವಪ್ರಭು ಸ್ವಾಮೀಜಿಗೆ ಜಿಪಿಎ ನೀಡಲಾಗಿದೆ ಎಂದಿದ್ದರು. . ಮಠಾಧಿಪತಿ ಜೈಲಿನಲ್ಲಿರುವುದನ್ನು ಕಾರಣವಾಗಿ ಆಡಳಿತಾಧಿಕಾರಿ ನೇಮಿಸುವುದು ಸಕಾರಣವಲ್ಲ. ಹೀಗಾಗಿ ರಾಜ್ಯ ಸರ್ಕಾರ ನೇಮಿಸಿರುವಂತ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸುವಂತೆ ಕೋರಿದ್ದರು.
ಪುದೀನಾ ನೀರಿನ ಆರೋಗ್ಯ ಪ್ರಯೋಜನಗಳೇನು ಗೊತ್ತಾ? ಈ ವಿಧಾನಗಳನ್ನು ಅನುಸರಿಸಿ | Peppermint water