ಮೈಸೂರು : ಜೆಡಿಎಸ್ ರಾಜ್ಯದ ಆರೂವರೆ ಕೋಟಿ ಜನರ ಎಟಿಎಂ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಸಿಎ ಕುಮಾರಸ್ವಾಮಿ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡಿದರು.
ದೇವೇಗೌಡರ ಕುಟುಂಬವು ನಾಡಿನ ಸಂಪತ್ತನ್ನು ಕೂಟಿ ಮಾಡಿದ ಒಂದೇ ಒಂದು ನಿದರ್ಶನವಿದ್ದರೆ ತೋರಿಸಲಿ, ಜೆಡಿಎಸ್ ರಾಜ್ಯದ ಆರೂವರೆ ಕೋಟಿ ಜನರ ಎಟಿಎಂ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ಧಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿರುವ ಬಿಜೆಪಿಗೆ ಕಾಂಗ್ರೆಸ್ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ. ಬಿಜೆಪಿಯಲ್ಲಿ ಯಡಿಯೂರಪ್ಪರನ್ನೇ ಮೂಲೆ ಗುಂಪಾಗಿ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರದಿಂದ ಕೂಡಿದ ಪಾರ್ಟಿ ಹಾಗೂ ಕುಟುಂಬ ರಾಜಕಾರಣ ಮಾಡುವ ಪಾರ್ಟಿ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಮಂಡ್ಯದಲ್ಲಿ ಭಾಷಣ ಮಾಡಿದ್ದರು. ಮಂಡ್ಯದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮಾಡಿದ್ದು, ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು ಯೋಚಿಸುತ್ತೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತದೆ ಎಂದು ಕಿಡಿಕಾರಿದ್ದರು.
2024ರೊಳಗೆ ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ಪೂರ್ಣ – ಸಿಎಂ ಬಸವರಾಜ ಬೊಮ್ಮಾಯಿ
ಪ್ರದೀಪ್ ಆತ್ಮಹತ್ಯೆ: ಲಿಂಬಾವಳಿ ಬಂಧನಕ್ಕೆ ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಆಗ್ರಹ