ಬೆಂಗಳೂರು : ನಗರದ ಶಿವಾಜಿನಗರ ವಿಧಾನಸಭೆ ಕ್ಷೇತ್ರದಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ.
BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್ಪಿಪಿಗೆ ಸೇರ್ಪಡೆ
ಈ ವೇಳೆ ಮಾತನಾಡಿದ ಅವರು, ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿ ಗೆದ್ದರೆ ರಾಜ್ಯದಲ್ಲಿ 130ಕ್ಕೂ ಹೆಚ್ಚು ಬಿಜೆಪಿ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಬೂತ್ ಮಟ್ಟದಲ್ಲಿ ವಿಜಯ ಸಾಧಿಸಬೇಕು ಎಂಬ ಕಾರಣಕ್ಕೆ ಇಲ್ಲಿಂದ ಚಾಲನೆ ನೀಡಲಾಗಿದೆ. ನೀವು ಕಾರ್ಯಕ್ರಮ ಎಲ್ಲಿ ಭಾಗವಹಿಸುತ್ತೀರಿ ಎಂದು ನಳಿನ್ ಕುಮಾರ್ ಕಟೀಲ್ ಕೇಳಿದ್ದರು. ಬೆಂಗಳೂರಿನಲ್ಲೇ ಇರುತ್ತೇನೆ ಪಕ್ಷಕ್ಕೆ ಅತ್ಯಂತ ಕಷ್ಟವಾಗಿರುವ ಕ್ಷೇತ್ರವನ್ನು ಕೊಡಿ ಎಂದು ಕೇಳಿದೆ.
BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್ಪಿಪಿಗೆ ಸೇರ್ಪಡೆ
ನಮ್ಮ ಶಾಸಕರು ಇದ್ದಲ್ಲಿ ಬೇಡ ಎಂದೆ, ಶಿವಾಜಿನಗರ ಕ್ಷೇತ್ರ ಕೊಡಿ ಎಂದು ಕೇಳಿದೆ. ಒಂದು ಕಾಲದಲ್ಲಿ ಶಿವಾಜಿನಗರದಲ್ಲಿ ಬಿಜೆಪಿ ಗೆದ್ದಿದೆ. ಆಗ ಬಿಜೆಪಿ ಇಷ್ಟು ದೊಡ್ಡದಾಗಿ ಬೆಳದಿರಲಿಲ್ಲ. ಆದರೂ ಕಟ್ಟಾ ಸುಬ್ರಹ್ಮಣ್ಯ ನಾಯ್ಡು . ನಿರ್ಮಲ್ ಕುಮಾರ್ ಸುರಾನ ಗೆದ್ದಿದ್ದರು. ನಾವು ಸಂಘಟಿತವಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.