ನವದೆಹಲಿ : ಮೊಟ್ಟೆ ಅಂದ್ರೆ ಯಾರಿಗೆ ತಾನೆ ಇಷ್ಟ ಆಗೋದಿಲ್ಲ ಹೇಳಿ..ಅದರಲ್ಲೂಒಬ್ಬೊಬ್ಬರು ಮೊಟ್ಟೆಯನ್ನು ಎಗ್ ರೈಸ್, ಅಮ್ಲೆಟ್, ಎಗ್ ಕರಿ, ಹೀಗೆ ಹತ್ತಾರು ವಿಧಾನಗಳಲ್ಲಿ ತಯಾರಿಸಿ ತಿನ್ನುವುದಕ್ಕೆ ಇಷ್ಟಪಡುತ್ತಾರೆ. ಕೆಲವರು ವ್ಯಾಯಾಮ ಮತ್ತು ಜಿಮ್ ನಲ್ಲಿ ಸರ್ಕಸ್ ಮಾಡುವವರು ಮೊಟ್ಟೆಗಳನ್ನು ಹಸಿಯಾಗಿ ಸೇವನೆ ಮಾಡುತ್ತಾರೆ. ಅರ್ಥಾತ್ ಮೊಟ್ಟೆ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದೆ.ಇಂತಹ ಮೊಟ್ಟೆಗಳ ಬೆಲೆ ಹಿಂದೆಂದೂ ಕಾಣದ ಮಟ್ಟಕ್ಕೆ ಗಗನಕ್ಕೇರಿಯಾಗಿದ್ದು , ಮೊಟ್ಟೆಯ ಬೆಲೆ ಕೇಳಿ ಜನರನ್ನು ಬೆಚ್ಚಿ ಬೀಳುವ ಮಟ್ಟಕ್ಕೆ ಹೆಚ್ಚಳವಾಗಿದೆ
BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್ಪಿಪಿಗೆ ಸೇರ್ಪಡೆ
ದಿನದಿಂದ ದಿನಕ್ಕೆ ಮೊಟ್ಟೆ ಬೇಡಿಕೆ ಹೆಚ್ಚುತ್ತಲೇ ಇದೆ. ಹೆಚ್ಚಿದ ಬೇಡಿಕೆಯಿಂದಾಗಿ ಮೊಟ್ಟೆ ಬೆಲೆ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಅದರಂತೆ 5.50 ಪೈಸೆಗೆ ಮಾರಾಟವಾದ ಮೊಟ್ಟೆಯ ಬೆಲೆ 5 ಪೈಸೆಯಿಂದ 5.55 ಪೈಸೆಗೆ ಏರಿಕೆಯಾಗಿದೆ. 40 ವರ್ಷಗಳ ಕೋಳಿ ಸಾಕಾಣಿಕೆಯ ಇತಿಹಾಸದಲ್ಲಿ ಇದು ಗರಿಷ್ಠ ಮೊಟ್ಟೆ ಬೆಲೆಯಾಗಿದೆ. ಈ ಹಿಂದೆ 2 ಮೊಟ್ಟೆಯ ಗರಿಷ್ಠ ಬೆಲೆ 5.50 ಪೈಸೆ ಇತ್ತು. ಮೊಟ್ಟೆ ಚಿಲ್ಲರೆ ದರ 6.50 ರೂ.ಗೆ ಏರಿಕೆಯಾಗಿದೆ.
BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್ಪಿಪಿಗೆ ಸೇರ್ಪಡೆ
ಈ ಬೆಲೆ ಏರಿಕೆಯ ಬಗ್ಗೆ ತಮಿಳುನಾಡು ಕೋಳಿ ಸಾಕಾಣಿಕೆದಾರರ ಸಂಘದ ಕಾರ್ಯದರ್ಶಿ ಸುಂದರರಾಜನ್ ಮಾತನಾಡಿ ಕಳೆದ ಕೆಲವು ತಿಂಗಳಿಂದ ಹೊರ ದೇಶಗಳಿಗೆ ಮೊಟ್ಟೆ ರಫ್ತು ಹೆಚ್ಚಾಗುತ್ತಿದೆ. ಅದರಲ್ಲೂ ಒಂದು ತಿಂಗಳಲ್ಲಿ ಮಲೇಷ್ಯಾ ಒಂದರಲ್ಲೇ ಸುಮಾರು 4 ಕೋಟಿ ಮೊಟ್ಟೆಗಳು ರಫ್ತಾಗುತ್ತವೆ. ಒಟ್ಟಾರೆಯಾಗಿ ತಿಂಗಳಿಗೆ ಸುಮಾರು 10 ಕೋಟಿ ಮೊಟ್ಟೆಗಳು ವಿದೇಶಗಳಿಗೆ ರಫ್ತಾಗುತ್ತವೆ.
ಇದಲ್ಲದೇ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೇಕ್ ತಯಾರಿಕೆಗೂ ಬಳಕೆ ಮಾಡಲಾಗುತ್ತದೆ. ಇನ್ನೂ ತಮಿಳುನಾಡು ಮತ್ತು ಕೇರಳದಲ್ಲಿ ಮೊಟ್ಟೆ ಮಾರಾಟ ಹೆಚ್ಚಾಗಿದೆ. ಇದೇ ವೇಳೆ ಉತ್ತರದ ರಾಜ್ಯಗಳಲ್ಲಿ ಚಳಿ ಪ್ರಮಾಣ ಹೆಚ್ಚಾಗಿರುವುದರಿಂದ ಮೊಟ್ಟೆ ಉತ್ಪಾದನೆ ಕಡಿಮೆಯಾಗುತ್ತದೆ. ಇನ್ನೊಂದೆಡೆ ಚಳಿಗಾಲದಲ್ಲಿ ಮೊಟ್ಟೆಯ ಸೇವನೆ ಹಾಗೀ ಬೇಡಿಕೆಯೂ ಹೆಚ್ಚುತ್ತಿದ್ದು, ಹೆಚ್ಚು ಮೊಟ್ಟೆ ಮಾರಾಟವಾಗುತ್ತಿದೆ.
BIGG NEWS: ಗಂಗಾವತಿ ಕ್ಷೇತ್ರದ ಕೆಲ ಮುಖಂಡರು ಕೆಆರ್ಪಿಪಿಗೆ ಸೇರ್ಪಡೆ