ಕೆಎನ್ಎನ್ ಡಿಜಿಟಲ್ ಡೆಸ್ಕ್ : ಉತ್ತರಾಖಂಡದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಾಯಗೊಂಡ ಕ್ರಿಕೆಟಿಗ ರಿಷಭ್ ಪಂತ್ ಅವರ ಆರೋಗ್ಯ ಕ್ರಮೇಣ ಸುಧಾರಿಸುತ್ತಿದೆ. ಭಾನುವಾರ ಸಂಜೆ, ಅವರನ್ನು ತೀವ್ರ ನಿಗಾ ಘಟಕದಿಂದ (ಐಸಿಯು) ಖಾಸಗಿ ವಾರ್ಡ್ಗೆ ಸ್ಥಳಾಂತರಿಸಗಿದೆ ಎಂದು ತಿಳಿದು ಬಂದಿದೆ.
ವರದಿಯ ಪ್ರಕಾರ, ರಿಷಭ್ ಪಂತ್ ಅವರನ್ನು ಅಸ್ಥಿರಜ್ಜು ಚಿಕಿತ್ಸೆಗಾಗಿ ವಿದೇಶಕ್ಕೆ ಸ್ಥಳಾಂತರಿಸಬೇಕೆ ಎಂಬುದರ ಕುರಿತಂತೆ ಬಿಸಿಸಿಐ ನಿಯಂತ್ರಣ ಮಂಡಳಿಯೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳಲಿದೆ. ಇತ್ತ ಅವರ ಕುಟುಂಬವು ಗೌಪ್ಯತೆಗಾಗಿ ವಿನಂತಿಸಿದೆ.
ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಭಾನುವಾರ ಮ್ಯಾಕ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಕ್ರಿಕೆಟರ್ ಆರೋಗ್ಯದ ಕುರಿತಂತೆ ಮಾಹಿತಿ ಪಡೆದಿದರು. ಇದೇ ವೇಳೆ ರಿಷಭ್ ಪಂತ್, ರಕ್ಷಿಸಿದ ಹರಿಯಾಣ ರಸ್ತೆಮಾರ್ಗಗಳ ಬಸ್ ಚಾಲಕ ಸುಶೀಲ್ ಕುಮಾರ್ ಮತ್ತು ಪರಮಜೀತ್ ಅವರಿಗೆ ಸಿಎಂ ಧಮಿ ಧನ್ಯವಾದ ಅರ್ಪಿಸಿದರು. ಕೇಂದ್ರ ಸರ್ಕಾರದ ಉತ್ತಮ ಸಮರಿಟನ್ ಪ್ರಶಸ್ತಿಯಡಿಯಲ್ಲಿ ಇವರಿಬ್ಬರನ್ನು ಗೌರವಿಸಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು.
ಡಿ.27 ರಂದು ನಡೆದ ಭೀರಕ ಅಪಘಾತದಲ್ಲಿ ರಿಷಭ್ ಪಂತ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
WATCH VIDEO: 3 ವರ್ಷದ ಬಾಲಕಿಯನ್ನು ರೈಲು ಹಳಿಗೆ ತಳ್ಳಿದ ಮಹಿಳೆ, ಆಘಾತಕಾರಿ ವಿಡಿಯೋ ವೈರಲ್
BIGG NEWS: ಸೆಪ್ಟೆಂಬರ್ ನಲ್ಲೇ ಬೆಂಗಳೂರಿಗೆ ಎಂಟ್ರಿಕೊಟ್ಟಿದ್ದ ಹೊಸ ತಳಿ ಬಿಎಫ್ 7…!; ಮತ್ತಷ್ಟು ಹೆಚ್ಚಿದ ಆತಂಕ
BIGG NEWS : ಸಿದ್ದೇಶ್ವರ ಸ್ವಾಮೀಜಿ ಒಪ್ಪಿದ್ರೆ ಎಲ್ಲ ರೀತಿಯ ಚಿಕಿತ್ಸೆಗೂ ಸಿದ್ದ : ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ