ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಜನರಿಗೆ ತಮ್ಮ ಆಧಾರ್ ಕಾರ್ಡ್ ಮತ್ತು ಪ್ರತಿಗಳನ್ನು ಎಲ್ಲಿಯೂ ಬಿಡದಂತೆ ಸಲಹೆ ನೀಡಿದೆ.
ಸಾಮಾಜಿಕ ಮಾಧ್ಯಮಗಳು ಮತ್ತು ಇತರ ಸಾರ್ವಜನಿಕ ವೇದಿಕೆಗಳಲ್ಲಿ ಆಧಾರ್ ಸಂಖ್ಯೆಯನ್ನು ಪ್ರದರ್ಶಿಸಬಾರದು ಮತ್ತು ಹಂಚಿಕೊಳ್ಳಬಾರದು. ಆಧಾರ್ ಅನ್ನು ಧೈರ್ಯವಾಗಿ ಬಳಸಬಹುದು ಆದರೆ ಅದರ ಬಳಕೆಯ ಮೇಲೆ ಕಣ್ಣಿಡುವುದು ಉತ್ತಮ ಎಂದು ಅದು ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಎಚ್ಚರಿಸಿದೆ. ಇತರರೊಂದಿಗೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳುವಾಗ ಜಾಗರೂಕರಾಗಿರಿ. ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಅಂತ ತಿಳಿಸಿದೆ.
ಎಂ-ಆಧಾರ್ ಪಿನ್ ಸಂಖ್ಯೆಯನ್ನು ಸಹ ಯಾರಿಗೂ ಬಹಿರಂಗಪಡಿಸಬಾರದು. ಕಳೆದ ಆರು ಪ್ರತಿ ಬಾರಿ ಆಧಾರ್ ದೃಢೀಕರಣವನ್ನು ಮಾಡಿದಾಗ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಇ-ಮೇಲ್ ಮೂಲಕ ಅದನ್ನು ತಿಳಿಸುತ್ತದೆ ಮತ್ತು ಆದ್ದರಿಂದ ಪ್ರತಿಯೊಬ್ಬ ಆಧಾರ್ ಕಾರ್ಡ್ದಾರರು ತಮ್ಮ ಇಮೇಲ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಬೇಕು ಎಂದು ಅದು ಹೇಳಿದೆ. ಒಟಿಪಿ ಆಧಾರಿತ ದೃಢೀಕರಣದ ಮೂಲಕ ಅನೇಕ ಸೇವೆಗಳನ್ನು ಪಡೆಯಬಹುದಾಗಿರುವುದರಿಂದ, ಮೊಬೈಲ್ ಸಂಖ್ಯೆಯನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಬೇಕು ಎಂದು ಸೂಚಿಸಲಾಗಿದೆ.
ಆಧಾರ್ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ, ನೀವು 24 ಗಂಟೆಗಳಲ್ಲಿ ಯಾವಾಗ ಬೇಕಾದರೂ 1947 ಟೋಲ್ ಫ್ರೀ ಸಂಖ್ಯೆಯನ್ನು ಸಂಪರ್ಕಿಸಬಹುದು ಎನ್ನಲಾಗಿದೆ.