ಕೆಎನ್ಎನ್ಡಿಜಿಟಲ್ ಡೆಸ್ಕ್ : ತನ್ನ ಮಗು ನನ್ನಂತಿಲ್ಲ, ನನ್ನ ಗಂಡನಂತೆಯೂ ಇಲ್ಲ, ಕನಿಷ್ಟ ಪಕ್ಷ ಕಣ್ಣುಗಳು ಕೂಡ ಒಂದಕ್ಕೊಂದು ಹೋಲಿಕೆಯಾಗ್ತಿಲ್ಲ. ಇದಕ್ಕೆ ಕಾರಣವೇನಿರಬೋದು ಅನ್ನೋ ಅನುಮಾನ ಮಹಿಳೆಯೊಬ್ಬಳಿಗೆ ಕಾಡಿದ್ದು, ತಕ್ಷಣ ವೈದ್ಯರನ್ನ ಸಂಪರ್ಕಿಸಿದ್ದಾಳೆ. ಅದ್ರಂತೆ, ‘ತಮ್ಮ ಮಗುವಿಗೆ ನಮ್ಮಿಬ್ಬರ ಹೋಲಿಕೆಯಿಲ್ಲ, ಕಾರಣವೇನು.? ಎಂದು ಪ್ರಶ್ನಿಸಿದ್ದಾರೆ. ನಂತ್ರ ಆ ಮಗುವಿಗೆ ಕೆಲವು ಪರೀಕ್ಷೆಗಳನ್ನ ಮಾಡಿ್ದು, ಆ ಪರೀಕ್ಷೆಗಳಲ್ಲಿ ಹಲವು ಆಘಾತಕಾರಿ ಸತ್ಯಗಳು ಬಯಲಾಗಿವೆ.
ಹನ್ನಾ ಡಾಯ್ಲ್ ಎಂಬ ಮಹಿಳೆ ತನ್ನ ಪತಿಯೊಂದಿಗೆ UKಯ ಯಾರ್ಕ್ಷೈರ್ನಲ್ಲಿ ವಾಸಿಸುತ್ತಾಳೆ. ಮೂರು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ ಈಕೆ, ಮಗುವಿಗೆ ಕ್ಸಾಂಡರ್ ಎಂದು ಹೆಸರಿಟ್ಟಿದ್ದಾಳೆ. ಕ್ಸಾಂಡರ್ ಹುಟ್ಟುವಾಗ ಸ್ವಲ್ಪ ವಿಭಿನ್ನವಾಗಿ ಕಂಡಿದ್ದಾದ್ರು ಹನ್ನಾ ಅದನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಮಗು ಹುಟ್ಟಿದಾಗ ಕತ್ತಿನ ಹಿಂಭಾಗದಲ್ಲಿ ಗಡ್ಡೆ ಕಾಣಿಸಿಕೊಂಡಿತು. ಆತಂಕಗೊಂಡ ಹನ್ನಾ ವೈದ್ಯರ ಗಮನಕ್ಕೆ ತಂದರು. ಆದ್ರೆ, ವೈದ್ಯರು ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ಹೇಳಿದರು. ಆದ್ರೆ, ಪ್ರತಿದಿನ ಹನ್ನಾ ಮಗುವಿನಲ್ಲಿ ಬದಲಾವಣೆಗಳನ್ನ ಗಮನಿಸಿದ್ದು, ಏನೋ ಸಮಸ್ಯೆಯಾಗಿದೆ ಎಂದು ಭಾವಿಸಿ ಮತ್ತೆ ವೈದ್ಯರ ಬಳಿಗೆ ಹೋಗಿದ್ದಾಳೆ.
ಮಗು, ನನ್ನ ಅಥವಾ ನನ್ನ ಪತಿಯನ್ನ ಹೋಲುತ್ತಿಲ್ಲ.? ಒಂದಿಷ್ಟು ಸಾಮ್ಯತೆಯೂ ಕಾಣುತ್ತಿಲ್ಲ. ಇದಕ್ಕೆ ಕಾರಣವೇನು.? ಅಸಲಿಗೆ ಸಮಸ್ಯೆಯಾದ್ರು ಏನಿದೆ ಹೇಳಿ ‘ ಎಂದು ವೈದ್ಯರನ್ನ ದಬಾಯಿಸಿದಳು. ಆಗ ಮಗುವಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಫಲಿತಾಂಶ ಕಂಡು ಶಾಕ್ ಆಗಿದ್ದಾರೆ. ವೈದ್ಯರ ಪರೀಕ್ಷೆಯಲ್ಲಿ ಮಗುವಿಗೆ ಅಪರೂಪದ ಕಾಯಿಲೆ ಇರುವುದು ಪತ್ತೆಯಾಗಿದೆ. ಮಗು ಅಪರೂಪದ ಕ್ರೋಮೋಸೋಮ್ ಹೊಂದಿದ್ದು, ಈ ಕಾರಣದಿಂದಾಗಿ ಅಪರೂಪದ ಅಳಿಸುವಿಕೆ ಸಿಂಡ್ರೋಮ್ ಇದೆ. ಈಗಾಗಲೇ ಮೂರು ತಿಂಗಳ ವಯಸ್ಸಿನ ಕ್ಸಾಂಡರ್ಗೆ ಹೃದಯ ಸಮಸ್ಯೆ ಇದ್ದು, ಹೃದಯದಲ್ಲಿ ರಂಧ್ರವಿದೆ ಎಂದು ಹನ್ನಾಗೆ ಬಹಿರಂಗಪಡಿಸಿದ್ದಾರೆ. ಅದ್ರಂತೆ, ಮಗುವಿಗೆ ತನ್ನ ಹೋಲಿಕೆಗಳೇಕೆ ಇಲ್ಲ ಎಂದು ಕೇಳಲು ಹೋದ ಮಹಿಳೆಗೆ, ಮಗುವಿಗೆ ಅಪರೂಪದ ಕಾಯಿಲೆ ಇರುವುದು ಬಹಿರಂಗವಾಗಿದೆ. ಈ ಸತ್ಯ ನಿಜಕ್ಕೂ ತಾಯಿಗೆ ಆಘಾತ ಉಂಟು ಮಾಡಿದೆ.
BREAKING NEWS : ‘ಮುರುಘಾ ಶ್ರೀ’ ವಿರುದ್ಧ ಪಿತೂರಿ ಕೇಸ್ : ‘ಸೌಭಾಗ್ಯ ಬಸವರಾಜನ್’ ಗೆ ಜಾಮೀನು ಮಂಜೂರು
ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧಕ್ಕಾಗಿ ರಾಷ್ಟ್ರೀಯ ಭದ್ರತೆಯಲ್ಲಿ ಭಾರತ ರಾಜಿ ಮಾಡಿಕೊಳ್ಳಲ್ಲ : ರಾಜನಾಥ್ ಸಿಂಗ್
ಮಧುಮೇಹಿಗಳೇ ಎಚ್ಚರ ; ಈ ‘ಹಿಟ್ಟಿ’ನಿಂದ ತಯಾರಿಸಿದ ‘ಚಪಾತಿ’ ತಿಂದ್ರೆ ನಿಮ್ಮ ‘ಶುಗರ್ ಲೆವೆಲ್’ ಹೆಚ್ಚಾಗುತ್ತೆ.!