ಮಂಡ್ಯ : ಕಾಂಗ್ರೆಸ್ ಹಾಗೂ ಜೆಡಿಎಸ್ ಭ್ರಷ್ಟಾಚಾರದಿಂದ ಕೂಡಿದ ಪಾರ್ಟಿ ಹಾಗೂ ಕುಟುಂಬ ರಾಜಕಾರಣ ಮಾಡುವ ಪಾರ್ಟಿ ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಗುಡುಗಿದ್ದಾರೆ.
ಮಂಡ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಅಮಿತ್ ಶಾ ಭಾಷಣ ಮಾಡಿದ್ದಾರೆ. ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು ಯೋಚಿಸುತ್ತೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ಡಬನ್ ಎಂಜಿನ್ ಸರ್ಕಾರ ಯಶಸ್ವಿಯಾಗಿ ಆಡಳಿತ ನಡೆಸಲಿದೆ. 2018 ರಲ್ಲಿ ಮಂಡ್ಯದಿಂದಲೇ ನಾವು ಪ್ರಚಾರ ಮಾಡಿದ್ವಿ. . 2019 ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂತು. ಈ ಎರಡು ಪಕ್ಷದಲ್ಲಿ ಹಲವರು ಕ್ರಿಮಿನಲ್ ಗಳಿದ್ದಾರೆ. ಎರಡು ಪಕ್ಷಗಳು ಭ್ರಷ್ಟಾಚಾರದಿಂದ ತುಂಬಿ ಹೋಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೆಹಲಿಗೆ ಎಟಿಮ್ ಆಗುತ್ತದೆ.. ಜೆಡಿಎಸ್ ಯಾವಾಗಲೂ ಹೇಗೆ ಒಂದು ಕುಟುಂಬವನ್ನು ಅಭಿವೃದ್ದಿ ಮಾಡಬೇಕು ಎಂದು ಯೋಚಿಸುತ್ತೆ, ಕಾಂಗ್ರೆಸ್ ಭ್ರಷ್ಟಾಚಾರ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ರಾಮನಾಥ್ ಕೋವಿಂದ್, ಹಾಗೂ ದ್ರೌಪದಿ ಮುರ್ಮು , ಇಬ್ಬರು ದಲಿತರನ್ನು ರಾಷ್ಟ್ರಪತಿಗಳಾಗಿ ಮಾಡಿದೆವು. ಕಿಸಾನ್ ಸಮ್ಮಾನ್ ನಿಂದ ಜನರಿಗೆ 6000 ರೂ ಹಣ ನೀಡಿದೆವು. ಬಿಜೆಪಿ ಬಡವರಿಗಾಗಿ ಹಲವು ಜನಪರ ಯೋಜನೆಗಳನ್ನು ತಂದಿದೆ ಎಂದು ಹೇಳಿದರು.
BIGG NEWS : ‘2023 ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ’ : ಸಿಎಂ ಬೊಮ್ಮಾಯಿ
BREAKING NEWS : ಮುಂದಿನ ವರ್ಷವೂ ‘ಗರೀಬ್ ಕಲ್ಯಾಣ ಯೋಜನೆ’ ವಿಸ್ತರಣೆ : ಸಿಎಂ ಬೊಮ್ಮಾಯಿ