ಬೆಂಗಳೂರು: ಇನ್ನೇನು ವರ್ಷಕ್ಕೆ ಕ್ಷಣಗಣನೆ ಶುರುವಾಗಿದೆ. ಕಳೆದ ಎರಡು ವರ್ಷಗಳ ನಂತರ ಹೊಸ ವರ್ಷವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ಹೀಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕೂಡ ಫುಲ್ ಅಲರ್ಟ್ ಆಗಿದೆ. ಇದೀಗ ಹೊಸ ವರ್ಷಕ್ಕೆ ಹೊರಗೆ ಹೋಗುವುದಕ್ಕೆ ಪ್ಲ್ಯಾನ್ ಮಾಡುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಬೆಟ್ಟದ ಕಡೆ ಹೋಗಿ ಸಮಯ ಕಳೆಯುವುದಕ್ಕೆ ನೋಡುತ್ತಾರೆ. ಆದರೆ ಹೊಸ ವರ್ಷಾಚರಣೆಗೆ ನಂದಿಬೆಟ್ಟದಲ್ಲಿ ನಿರ್ಬಂಧ ಹೇರಲಾಗಿದೆ.ಡಿ.31ಸಂಜೆ 6 ಗಂಟೆಯಿಂದ ಜ.1 ಬೆಳಿಗ್ಗೆ 6 ಗಂಟೆವರೆಗೂ ನಿರ್ಬಂಧ ವಿಧಿಸಲಾಗಿದೆ. ಸಾರ್ವಜನಿಕರ ಪ್ರವೇಶ ಹಾಗೂ ಸಂಭ್ರಮಾಚರಣೆಗೆ ನಿರ್ಬಂಧ ವಿಧಿಸುವುದಾಗಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಡ್ರಿಂಕ್ ಆಂಡ್ ಡ್ರೈವ್ ಅಪಘಾತ ಹಾಗೂ ಕೊರೊನಾ ಹರಡದಂತೆ ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಂದಿಗಿರಿಧಾಮದ ಮೇಲೆ ಡಿ.31ರಂದು ರೂಮ್ ಬುಕಿಂಗ್ ಸಹ ರದ್ದುಗೊಳಿಸಲಾಗಿದೆ. ನಂದಿಗಿರಿಧಾಮದ ಸುತ್ತಮುತ್ತ ಸೂಕ್ತ ಬಂದೋಬಸ್ತ್ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಿಂದ ಅನತಿ ದೂರದಲ್ಲಿರುವ ನಿಸರ್ಗ ಪ್ರಿಯರ ಮತ್ತು ಚಾರಣಿಗರ ಪ್ರೀತಿಯ ಪ್ರವಾಸಿ ತಾಣ ನಂದಿ ಬೆಟ್ಟವನ್ನು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ. ಡಿಸೆಂಬರ್ 31 ರ ಸಂಜೆಯಿಂದ ಜನವರಿ 1 ಬೆಳಿಗ್ಗೆವರೆಗೂ ಪ್ರವೇಶ ನಿಷೇಧಿಸಲಾಗಿದೆ. ನಂದಿಬೆಟ್ಟದ ಮೇಲೆ ಕೊಠಡಿಗಳಲ್ಲಿ ತಂಗಲು ಅವಕಾಶವಿಲ್ಲ. ಡಿಸೆಂಬರ್ 31 ರಂದು ರೂಂ ಬುಕಿಂಗ್ ಗೆ ಅವಕಾಶವಿಲ್ಲ.