ಮಂಡ್ಯ : ಅಮುಲ್ ಜೊತೆಗೆ ನಂದಿನಿ “ಮಿಲನ” ಮಾಡುವ ಬಗ್ಗೆ ಕೇಂದ್ರ ಸಹಕಾರಿ ಸಚಿವ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮಹ್ವದ ಸುಳಿವು ಬಿಚ್ಚಿಟ್ಟಿದ್ದಾರೆ.
ಅವರು ಇಂದ ಮಂಡ್ಯದಲ್ಲಿ ನಡೆಯುತ್ತಿರುವ ಮೆಗಾಡೈರಿ ಉದ್ಘಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಹಾಲು ಉತ್ಪಾದನ ಫೀಲ್ಡ್ನಲ್ಲಿ ಅಮುಲ್ ಜೊತೆಗೆ ನಂದಿನಿ ಕೆಲಸ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಮಾಡಬಹುದಾಗಿದೆ ಅಂತ ಹೇಳಿದರು.
ಇದೇ ವೇಳೇ ಅವರು ಮಾತನಾಡಿ ಇದಕ್ಕೆ ಬೇಕಾಗಿರುವ ಎಲ್ಲಾ ಸಹಕಾರವನ್ನು ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ಸಹಕಾರಿ ಫೀಲ್ಡ್ನಲ್ಲಿ ಕರ್ನಾಟಕ ಮಾಡಿರುವ ಕೆಲಸಗಳ ಬಗ್ಗೆ ಅವರು ಶ್ಲಾಘನೆ ಮಾಡಿದರು. ಇನ್ನೂ ಶ್ವೇತ ಕ್ರಾಂತಿಯಿಂದ ರೈತರ ಬದುಕು ಹಸನಗಾಗಲಿದೆ ಎನ್ನಲಾಗಿದೆ. ಇದೇ ವೇಳೆ ಅವರು ಸಹಕಾರಿ ಸಚಿವಾಲಯ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಅರ್ಪಿಸಿದರು.