ಮಂಡ್ಯ: ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಮೆಗಾ ಡೈರಿ ಅಮಿತ್ ಶಾ ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅಮಿತ್ ಶಾ ಅವರು, ಸಹಕಾರ ಸಂಘಗಳಿಂದ ರೈತರ ಅಭಿವೃದ್ಧಿಯಾಗಿದೆ. ಪ್ರಧಾನಿ ಮೋದಿ ಸಹಕಾರಿ ಸಚಿವಾಲಯ ಮಾಡಿದ್ರು. ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಮೆಗಾ ಡೈರಿ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಹಾಕರ ಕ್ಷೇತ್ರದ ಸದಸ್ಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಒಟ್ಟು 260 ಕೋಟಿ ಹೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣವಾಗಿದೆ. ಕೋ ಅಪರೇಟಿವ್ ಡೇರಿಗಳಲ್ಲಿ ಕರ್ನಾಟಕ ಮುಂದೆ ಇದೆ. ಪ್ರತಿದಿನ 10 ಲಕ್ಷ ಲೀಟರ್ ಹಾಲು ಸಂಗ್ರಹ ಸಾಮರ್ಥ್ಯ ಇದೆ. 14 ಲಕ್ಷ ಲೀಟರ್ ಹಾಲು ಸಂಗ್ರಹದ ಘಟಕ ನಿರ್ಮಾಣದ ಗುರಿ ಹೊಂದಿದೆ. ಸಹಕಾರ ಕ್ಷೇತ್ರದಲ್ಲಿ ರಾಜ್ಯ ಮುಂಚೂಣಿಯಲ್ಲಿದೆ.
15,210 ಸಹಕಾರಿ ಹಾಲು ಉತ್ಪಾದನಾ ಡೇರಿಗಳಿವೆ. ಸುಮಾರು 16 ಜಿಲ್ಲೆಗಳಿಂದ ಪ್ರತಿ ತಿಂಗಳು ೨೮ ಕೋಟಿ ರೂಪಾಯಿ ಸಂದಾಯವಾಗುತ್ತಿದೆ. 1975 ರಿಂದ 2022ವರೆಗೂ ಡೇರಿ ಕ್ಷೇತ್ರದಲ್ಲಿ ಉತ್ತಮ ಬೆಳವಣಿಗೆ ಇದೆ ಎಂದರು.
ಅಮೂಲ್ ಮತ್ತು ನಂದಿನಿ ಒಟ್ಟಾಗಿ ಹೋಗಲು ಕೆಲಸ ಮಾಡಬೇಕಿದೆ. ಒಟ್ಟಿಗೆ ಕೆಲಸ ಮಾಡಿದ್ರೆ ಎಲ್ಲ ಹಳ್ಳಿಗಳಲ್ಲಿ ಘಟಕ ಸ್ಥಾಪಿಸಬಹುದು. 2 ಲಕ್ಷ ಪ್ರಾಥಮಿಕ ಡೇರಿ ನಿರ್ಮಾಣಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.