ಅಹಮದಾಬಾದ್: ನಗರದ ಯು ಎಸ್ ಮೆಹ್ತಾ ಆಸ್ಪತ್ರೆಯಲ್ಲಿ ಇಂದು ಅನಾರೋಗ್ಯದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೀರಾಬೆನ್ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಯನ್ನು ಗಾಂಧಿನಗರದ ಸೆಕ್ಟರ್ 30ರ ರುದ್ರಭೂಮಿಯಲ್ಲಿ ನೆರವೇರಿಸಲಾಗಿದೆ. ಪ್ರಧಾನಿ ಮೋದಿ ತಾಯಿಯ ಪಾರ್ಥೀವ ಶರೀರದ ಚಿತೆಗೆ ಅಗ್ನಿಸ್ಪರ್ಷ ಮಾಡಿದರು. ಈ ಮೂಲಕ ಮೋದಿಯವರ ತಾಯಿ ಹೀರಾ ಬೆನ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದಾಗಿ ಅಹಮದಾಬಾದ್ ನಲ್ಲಿನ ಯು ಎಸ್ ಮೆಹ್ತಾ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬೆನ್ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರನ್ನು ಮೋದಿ ಭೇಟಿಯಾಗಿಯೂ ಆರೋಗ್ಯ ವಿಚಾರಿಸಿದ್ದರು. ಇಂದು ಅವರನ್ನು ಡಿಸ್ಚಾರ್ಜ್ ಕೂಡ ಮಾಡಲಾಗುತ್ತದೆ ಎನ್ನಲಾಗಿತ್ತು. ಆದ್ರೇ ದಿಢೀರ್ ಚಿಕಿತ್ಸೆ ಫಲಿಸದೇ ನಿಧನರಾಗಿದ್ದರು.
ಇಂತಹ ಅವರ ಪಾರ್ಥೀವ ಶರೀರವನ್ನು ಅಹಮದಾಬಾದ್ ಆಸ್ಪತ್ರಯಿಂದ ಪುತ್ರನ ಮನೆಗೆ ಕೊಂಡೊಯ್ಯಲಾಗಿತ್ತು. ಸೀಮಿತ ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ, ಗಾಂಧಿನಗರದ ಸೆಕ್ಟರ್ 30ರಲ್ಲಿನ ರುದ್ರಭೂಮಿಗೆ ಕೊಂಡೊಯ್ಯಲಾಗಿತ್ತು. ಅಂತಿಮ ವಿಧಿ ವಿಧಾನವನ್ನು ಹೀರಾಬೆನ್ ಪುತ್ರರಾಗಿರುವಂತ ಪ್ರಧಾನಿ ನರೇಂದ್ರ ಮೋದಿಯವರು ನೆರವೇರಿಸಿದರು. ಬಳಿಕ ಚಿತೆಗೆ ಅಗ್ನಿ ಸ್ಪರ್ಷ ಮಾಡಿದರು.