ಬೆಂಗಳೂರು: ಕಾಂಪೌಂಡ್ ಗೋಡೆಯನ್ನು ದುರಸ್ತಿ ನಡೆಸುತ್ತಿದ್ದಂತ ವೇಳೆಯಲ್ಲಿ, ದಿಢೀರ್ ಗೋಡೆ ಕುಸಿತಗೊಂಡ ಪರಿಣಾಮ, ಇಬ್ಬರು ಕಾರ್ಮಿಕರು ಸಾವನ್ನಪ್ಪಿರೋ ಘಟನೆ ನಡೆದಿದೆ.
ಬೆಂಗಳೂರಿನ ಭಾರತಿನಗರದ ಎಂಇಜಿ ಅಧಿಕಾರಿಗಳ ಕಾಲೋನಿಯಲ್ಲಿನ ಕಾಂಪೌಂಡ್ ಗೋಡೆಯನ್ನು ದುರಸ್ತಿಗೊಳಿಸೋ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದರು. ಈ ವೇಳೆ ದಿಢೀರ್ ಗೋಡೆ ಕುಸಿದ ಪರಿಣಾಮ, ಅದರಡಿಯಲ್ಲಿ ಸಿಲುಕಿ ಆಶಮ್ಮ(21) ಹಾಗೂ ಅಕ್ರಮ್ ಉಲ್ ಹಕ್(22) ಮೃತಪಟ್ಟಿರೋದಾಗಿ ತಿಳಿದು ಬಂದಿದೆ.
ಮೃತ ಆಶಮ್ಮ ಚಳ್ಳಕೆರೆ ಮೂಲದವರಾಗಿದ್ದರೇ, ಅಕ್ರಮ್ ಉಲ್ ಹಕ್ ಪಶ್ಚಿಮ ಬಂಗಾಳದ ಮೂಲದವರಾಗಿದ್ದಾರೆ. ಈ ಇಬ್ಬರು ಎರಡು ವರ್ಷಗಳಿಂದ ನಗರದಲ್ಲಿ ನೆಲೆಸಿ, ಗಾರೆ ಕೆಲಸ ಮಾಡುತ್ತಿದ್ದರು. ನಿನ್ನೆ ಮರಬಿದ್ದು ಹಾಳಾಗಿದ್ದಂತ ಎಂಇಜಿ ಅಧಿಕಾರಿಗಳ ಕಾಲೋನಿಯ ಕಾಂಪೌಂಡ್ ದುರಸ್ತಿ ವೇಳೆ ಗೋಡೆ ಕುಸಿದು ಸಾವನ್ನಪ್ಪಿದ್ದಾರೆ.
ಕೋವಿಡ್ ಬಿಎಫ್.7 ತಡೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ: ಕೊರೋನಾ ಪರೀಕ್ಷೆ ಹೆಚ್ಚಳ | Covid19 Test
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೇನ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರ ಸಂತಾಪ