ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ದೇಶದಲ್ಲಿಯೇ ರಸ್ತೆ ಅಪಘಾತದಿಂದ ಉಂಟಾಗಿರುವಂತ ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನದಲ್ಲಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಹಿತಿ ಬಿಡುಗಡೆ ಮಾಡಿದ್ದು, 2021ರಲ್ಲಿ ಸಂಭವಿಸಿದಂತ ರಸ್ತೆ ಅಪಘಾತದಲ್ಲಿ ( Road Accident ) ಸಾವನ್ನಪ್ಪಿದವರ ಸಂಖ್ಯೆಯಲ್ಲಿ ನವದೆಹಲಿ ಮೊದಲು, ಚೆನ್ನೈ 2ನೇ ಸ್ಥಾನದಲ್ಲಿದ್ದರೇ ಬೆಂಗಳೂರು ಮೂರನೇ ಸ್ಥಾನದಲ್ಲಿದೆ.
ಅಂದಹಾಗೇ ಅಂಕಿ ಅಂಶಗಳ ಪ್ರಕಾರ ಬೆಂಗಳೂರಿನಲ್ಲಿ 2021ರ ವರ್ಷದಲ್ಲಿ 3,214 ಅಪಘಾತಗಳು ಉಂಟಾಗಿವೆ. ಈ ಅಪಘಾತದಲ್ಲಿ 654 ಮಂದಿ ಸಾವನ್ನಪ್ಪಿದ್ದಾರೆ. ಇದು 2020ರಲ್ಲಿ 646 ಆಗಿತ್ತು.
ಇನ್ನೂ ರಸ್ತೆ ಅಪಘಾತಗಳ ಸಾವಿನಲ್ಲಿ ನಂ.1 ಸ್ಥಾನದಲ್ಲಿರುವಂತ ದೆಹಲಿಯಲ್ಲಿ ಒಟ್ಟು 4,720 ಅಪಘಾತಗಳು ಸಂಭವಿಸಿವೆ. ಇವುಗಳಲ್ಲಿ 1,239 ಮಂದಿ ಸಾವನ್ನಪ್ಪಿದ್ದಾರೆ. 2ನೇ ಸ್ಥಾನದಲ್ಲಿರುವ ಚೆನ್ನೈನಲ್ಲಿ 5,034 ಅಪಘಾತಗಳು ಸಂಭವಿಸಿದ್ದರೇ, 998 ಮಂದಿ ಸಾವನ್ನಪ್ಪಿದ್ದಾರೆ.
2021ರಲ್ಲಿ ಕರ್ನಾಟಕದಲ್ಲಿ ಒಟ್ಟು 34,647 ಅಪಘಾತಗಳು ಸಂಭವಿಸಿವೆ. ಹೀಗೆ ಉಂಟಾದಂತ ರಸ್ತೆ ಅಪಘಾತದಲ್ಲಿ 10,038 ಜನರು ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯ ರಸ್ತೆ ಅಪಘಾತಗಳ ಸಾವಿನ ಪ್ರಕಣಗಳಲ್ಲಿ 4ನೇ ಸ್ಥಾನದಲ್ಲಿದೆ.
ಕೋವಿಡ್ ಬಿಎಫ್.7 ತಡೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ: ಕೊರೋನಾ ಪರೀಕ್ಷೆ ಹೆಚ್ಚಳ | Covid19 Test
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೇನ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರ ಸಂತಾಪ