ಬೆಂಗಳೂರು: ರಾಜ್ಯ ಸರ್ಕಾರದಿಂದ ಮೊಲಾಸಿನ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವಂತೆ ಲಾಭಾಂಶವನ್ನು ರೈತರಿಗೆ ವರ್ಗಾಯಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ಆದೇಶಿಸಲಾಗಿದೆ. ಈ ಮೂಲಕ ಹೊಸ ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ಲಾಭಾಂಶದ ಹಣ ಸಿಗುವ ಮೂಲಕ, ಸಿಹಿಸುದ್ದಿ ಸಿಗಲಿದೆ.
ಈ ಕುರಿತಂತೆ ಕಬ್ಬು ನಿಯಂತ್ರಣ ಮಂಡಳಿ ಹಾಗೂ ಸಕ್ಕರೆ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಎಫ್ ಆರ್ ಪಿ ದರ ಹೊರತುಪಡಿಸಿ, ಪ್ರತಿ ಮೆಟ್ರಿಕ್ ಟನ್ ಗೆ ರೂ.100 ಹೆಚ್ಚು ಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರದ ಈ ಮೊದಲು ಎಥೆನಾಲ್ ನಿಂದ ಬರುವ ಲಾಭಾಂಶದಲ್ಲಿ ಮೆಟ್ರಿಕ್ ಟನ್ ಗೆ 50 ರೂ ಗಳಂತೆ ಒಟ್ಟು 204 ಕೋಟಿ ರೂ ಪಾವತಿಸಲು ಆದೇಶಿಸಿತ್ತು. ಈ ಬಳಿಕ ಈಗ ಮೊಲಾಸಿನ್ ಮಾರಾಟದಿಂದ ಬರುವಂತ ಲಾಭಾಂಶವನ್ನು ರೈತರಿಗೆ ಪಾವತಿಸಲು ಆದೇಶಿಸಲಾಗಿದೆ.
ಕೋವಿಡ್ ಬಿಎಫ್.7 ತಡೆಗೆ ರಾಜ್ಯ ಸರ್ಕಾರ ಮಹತ್ವದ ಕ್ರಮ: ಕೊರೋನಾ ಪರೀಕ್ಷೆ ಹೆಚ್ಚಳ | Covid19 Test
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೇನ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರ ಸಂತಾಪ