ಬೆಂಗಳೂರು: ವಿದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವಂತ ಕೋವಿಡ್ ಬಿಎಫ್.7 ಸೋಂಕಿನ ಅಲೆಯನ್ನು, ಕರ್ನಾಟಕದಲ್ಲಿ ತಡೆಯಲು ರಾಜ್ಯ ಸರ್ಕಾರದ ( Karnataka Government ) ಮಹತ್ವದ ಕ್ರಮ ಕೈಗೊಂಡಿದೆ. ಅದರ ಭಾಗವಾಗಿ ಕೋವಿಡ್ ಪರೀಕ್ಷೆಗಳನ್ನು ( Covid19 Test ) ಹೆಚ್ಚಳ ಮಾಡುವಂತ ನಿರ್ಧಾರಿಸಿದೆ.
ಹೌದು ರಾಜ್ಯದಲ್ಲಿ ಕೊರೋನಾ ( Coronavirus ) ರೂಪಾಂತರಿ ಬಿಎಫ್.7 ಸಂಭಾವ್ಯ ಹೊಸ ಅಲೆಯ ತಡೆಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್ ಪರೀಕ್ಷೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಕೊರೋನಾ ದೈನಂದಿನ ಪರೀಕ್ಷೆಯ ಗುರಿಯನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಐದು ಸಾವಿರದಿಂದ 15 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.
ಇದಲ್ಲದೇ ಸಾರಿ, ಐಎಲ್ಐ ಹಾಗೂ ಸೋಂಕಿತರ ಪ್ರಾಥಮಿಕ ಸಂಪರ್ಕಗಳ ಬಗ್ಗೆಯೂ ಆರೋಗ್ಯ ಇಲಾಖೆಯಿಂದ ಹೆಚ್ಚಿನ ನಿಗಾ ವಹಿಸಲಾಗಿದೆ. ಕೋವಿಡ್ ಬಿಎಫ್.7 ಸೋಂಕಿನಿಂದ ಆಗುವಂತ ತೊಂದರೆಯನ್ನು ತಡೆಗಟ್ಟೋ ಸಂಬಂಧ ಜನರು ಮುನ್ನೆಚ್ಚರಿಕೆ ಡೋಸ್ ಲಸಿಕೆಯನ್ನು ಪಡೆಯುವಂತೆಯೂ ಸಲಹೆ ಮಾಡಲಾಗಿದೆ.
ಇನ್ನೂ ಕೋವಿಡ್ ಉಲ್ಭಣಗೊಳ್ಳುತ್ತಿರುವ ಕಾರಣ, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ಕೈಗಳನ್ನು ಸ್ವಚ್ಚವಾಗಿ ಇರಿಸಬೇಕು ಎಂಬುದಾಗಿಯೂ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ಕೋವಿಡ್ ನಿಯಮ ಅನುಸರಿಸಿ, ಕೊರೋನಾವನ್ನು ರಾಜ್ಯದಲ್ಲಿ ನಿಯಂತ್ರಿಸೋ ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ.
ಮಂಡ್ಯದಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ರಣಕಹಳೆ: ಹಲವು ಕಾರ್ಯಕ್ರಮಗಳಲ್ಲಿ ಭಾಗಿ