ಬೆಂಗಳೂರು : ಮದುವೆ ಗಂಡಾಗಿದ್ದ ಈಶ್ವರಪ್ಪ ವೈರಾಗ್ಯ ಮೂಡಿ ಮದುವೆ ಆಸೆಯನ್ನೇ ಕೈಬಿಟ್ಟಂತಿದೆ ಎಂದು ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.
ನಾನು ಹಿರಿಯ, ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದ ಈಶ್ವರಪ್ಪನವರು ಈಗ ಸಚಿವ ಸ್ಥಾನಕ್ಕೂ ಕಣ್ಣೀರು ಸುರಿಸುವ ಸ್ಥಿತಿ ಒದಗಿದೆ, ಮುಂದೆ ಟಿಕೆಟ್ ಕೂಡ ಸಿಗದೆ ಮಾರ್ಗದರ್ಶಕ ಮಂಡಳಿಯ ಸ್ಥಾನ ಸಿಗುವ ಕಾಲ ದೂರವಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಇನ್ನೂ ಕೂಡ ಸಚಿವ ಸಂಪುಟ ವಿಸ್ತರಣೆ ನಿಗದಿಯಾಗದ ಹಿನ್ನೆಲೆ ಕಾಂಗ್ರೆಸ್ ಈಶ್ವರಪ್ಪ ಕಾಲೆಳೆದಿದೆ. ಸಚಿವ ಸ್ಥಾನಕ್ಕಾಗಿ ಈಶ್ವರಪ್ಪ, ರಮೇಶ್ ಜಾರಕಿಹೊಳಿ ಕಾದು ಕುಳಿತಿದ್ದಾರೆ. ಸಂಪುಟ ವಿಸ್ತರಣೆ ಸದ್ಯ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ನಿರಾಸೆ ಮೂಡಿದೆ.
ಮದುವೆ ಗಂಡಾಗಿದ್ದ @ikseshwarappa ಅವರು ವೈರಾಗ್ಯ ಮೂಡಿ ಮದುವೆ ಆಸೆಯನ್ನೇ ಕೈಬಿಟ್ಟಂತಿದೆ!
ನಾನು ಹಿರಿಯ, ನಾನೂ ಸಿಎಂ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದ ಈಶ್ವರಪ್ಪನವರು ಈಗ ಸಚಿವ ಸ್ಥಾನಕ್ಕೂ ಕಣ್ಣೀರು ಸುರಿಸುವ ಸ್ಥಿತಿ ಒದಗಿದೆ, ಮುಂದೆ ಟಿಕೆಟ್ ಕೂಡ ಸಿಗದೆ ಮಾರ್ಗದರ್ಶಕ ಮಂಡಳಿಯ ಸ್ಥಾನ ಸಿಗುವ ಕಾಲ ದೂರವಿಲ್ಲ!#BJPvsBJP pic.twitter.com/YgcKK4n9Ij
— Karnataka Congress (@INCKarnataka) December 29, 2022
OMG : ಪೋಷಕರೇ ಎಚ್ಚರ : 2 ವರ್ಷದ ಮಗುವಿನ ತಲೆ ಮೇಲೆ ದೊಪ್ಪನೆ ಬಿದ್ದ ತೆಂಗಿನಕಾಯಿ.!
BIGG NEWS : ‘ಪಂಚಮಸಾಲಿ’ ಸಮುದಾಯಕ್ಕೆ 2 ಡಿ ಮೀಸಲಾತಿ ಘೋಷಣೆ : ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದೇನು..?