ಕೀವ್( ಉಕ್ರೇನ್): ಇಂದು ರಷ್ಯಾ ಉಕ್ರೇನ್ ಮೇಲೆ ಬೃಹತ್ ವೈಮಾನಿಕ ದಾಳಿ ಮಾಡಿತ್ತು. ಬರೋಬ್ಬರಿ 100ಕ್ಕೂ ಹೆಚ್ಚಿ ಕ್ಷಿಪಣಿಗಳನ್ನು ಹಾರಿಸಿತ್ತು. ಇನ್ನು ರಷ್ಯಾ ಉಡಾವಣೆ ಮಾಡಿದ 69 ಕ್ಷಿಪಣಿಗಳ ಪೈಕಿ 54 ಕ್ಷಿಪಣಿಗಳನ್ನು ಉಕ್ರೇನ್ ವಾಯು ರಕ್ಷಣಾ ಪಡೆ ಗುರುವಾರ ಬೆಳಗ್ಗೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಸೇನೆ ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ರಷ್ಯಾ ಉಕ್ರೇನ್ ಮೇಲೆ ಒಟ್ಟು 69 ಕ್ಷಿಪಣಿಗಳನ್ನು ಉಡಾಯಿಸಿತ್ತು. ಅದರಲ್ಲಿ 54 ಕ್ಷಿಪಣಿಗಳನ್ನು ಉಕ್ರೇನ್ ವಾಯು ಪಡೆ ಹೊಡೆದುರುಳಿಸಿದೆ ಎಂದು ಉಕ್ರೇನ್ ಕಮಾಂಡರ್-ಇನ್-ಚೀಫ್ ಜನರಲ್ ವ್ಯಾಲೆರಿ ಜಲುಜ್ನಿ ಹೇಳಿದ್ದಾರೆ.
ಇಂದು ಬೆಳಗ್ಗೆ ಉಕ್ರೇನ್ ಮೇಲೆ ರಷ್ಯಾ 120 ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿತ್ತು. ಪರಿಣಾಮ ಉಕ್ರೇನ್ ಹಲವು ನಗರಗಳು ಹಾನಿಗೀಡಾಗಿದ್ದು, ವಿದ್ಯುತ್ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೂರಿವೆ ಎಂದು ಅಧ್ಯಕ್ಷೀಯ ಸಹಾಯಕ ಮೈಖೈಲೊ ಪೊಡೊಲ್ಯಾಕ್ ಹೇಳಿದ್ದರು.
BIGG NEWS : ವಾಹನ ಸಾವರರೇ ಎಚ್ಚರ ; ಹೆಚ್ಚುತ್ತಿದೆ ‘ರಸ್ತೆ ಅಪಘಾತ’ ಸಂಖ್ಯೆ ; ಒಂದೇ ವರ್ಷದಲ್ಲಿ 1,53,972 ಜನ ಸಾವು
BREAKING NEWS : ‘PGCET’ ಫಲಿತಾಂಶ ಪ್ರಕಟ ; ಈ ರೀತಿ ನಿಮ್ಮ ರಿಸಲ್ಟ್ ಚೆಕ್ ಮಾಡಿ |Karnataka PGCET Result 2022
ಕಳಸಾ ಬಂಡೂರಿ ಯೋಜನೆಗೆ ಅನುಮತಿ : ಬಿಜೆಪಿ ‘ಚುನಾವಣಾ ಗಿಮಿಕ್’ ಎಂದು ಕಾಂಗ್ರೆಸ್ ಟ್ವೀಟ್