ಚಿಕ್ಕಮಗಳೂರು : ‘ಕಾಡಾನೆ’ ಬಳಿಕ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ‘ಕಾಡುಕೋಣ’ ಪ್ರತ್ಯಕ್ಷ ವಾಗಿದ್ದು, ಜಮೀನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕಾಡುಕೋಣ ದಾಳಿಗೆ ಮೃತಪಟ್ಟಿದ್ದಾರೆ.
ಮೃತರನ್ನು ಸೋಮಶೇಖರ್ (45) ಎಂದು ಗುರುತಿಸಲಾಗಿದೆ. ಇವರು ಕಳಸ ತಾಲೂಕಿನ ತೋಟದೂರು ಸಮೀಪ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಕಾಡುಕೋಣ ದಾಳಿ ನಡೆಸಿದೆ. ಕೋಡಿನಿಂದ ತಿವಿದು ಕಾಡುಕೋಣ ಸೋಮಶೇಖರ್ ನನ್ನು ಕೊಂದಿದೆ.
ಕಾಡಾನೆ’ ಬಳಿಕ ‘ಜನರಲ್ಲಿ ಕಾಡುಕೋಣ’ ಆತಂಕ ಮೂಡಿಸಿದ್ದು, ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.