ಬೆಂಗಳೂರು ಗ್ರಾಮಾಂತರ : ಈಜಲು ತೆರಳಿದ್ದ ಮೊರಾರ್ಜಿ ವಸತಿ ಶಾಲೆ ಮತ್ತೋರ್ವ ಬಾಲಕ ಅದೇ ಈಜು ಹೊಂಡದಲ್ಲಿ ಶವವಾಗಿ ಮೃತಪಟ್ಟಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಮೊರಾರ್ಜಿ ವಸತಿ ಶಾಲೆ ಬಳಿ ಘಟನೆ ನಡೆದಿದೆ.
ನಿನ್ನೆ ಜುನೈದ್ (13) ಎಂಬ ಬಾಲಕನ ಶವ ಪತ್ತೆಯಾಗಿತ್ತು, ಇದೀಗ ಸಂತೋಷ್ ಎಂಬಾತನ ಬಾಲಕನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಕ್ಕಳನ್ನು ನೋಡಿಕೊಳ್ಳಲು ಮೇಲ್ವಿಚಾರಕನನ್ನು ನೇಮಿಸಿ ಶಿಕ್ಷಕರು ಪ್ರವಾಸಕ್ಕೆ ತೆರಳಿದ್ದರು. ಈ ಮೇಲ್ವಿಚಾರಕ 6 ಮಂದಿ ಮಕ್ಕಳನ್ನು ಕರೆದುಕೊಂಡು ಈಜಲು ಹೋಗಿದ್ದನು.ಈ ವೇಳೆ ಈಜು ಬಾರದೇ ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.
ನೀರಿನ ಹೊಂಡಕ್ಕೆ ಈಜಲು ಇಳಿದ ಆರು ವಿದ್ಯಾರ್ಥಿಗಳ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ, ಈ ಸಂಬಂಧ ಚನ್ನರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಲೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
BREAKING NEWS : ವಿಧಾನಸಭೆಯಲ್ಲಿ ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕ ಮಂಡನೆ