ಕಾರವಾರ: ಇನ್ನೇನು ಹೊಸ ವರ್ಷಕ್ಕೆ ಕ್ಷಣ ಕ್ಷಣನೆ ಶುರುವಾಗಿದೆ. ಅದೇನು ಹೊಸ ವರ್ಷ ಸಂಭ್ರಮ ಅಂದ್ಮೇಲೆ ಎಲ್ಲಿ ಮೋಜು- ಮಸ್ತಿ ಇರಲೇಬೇಕು ಅಲ್ವಾ? ಅದರ ಜೊತೆಗೆ ಎಣ್ಣೆ ಇಲ್ಲ ಅಂದರೆ ಹೇಗೆ ಕೇಳಿ. ಹೌದು ಹೊಸ ವರ್ಷಕ್ಕೆ ಬೇರೆ ಕಡೆಯಿಂದ ಮದ್ಯ ತರೆಲಾಗಿದೆ. ಅತೀ ಕಡಿಮೆ ಬೆಲೆಯಲ್ಲಿ ಸಿಗುವ ಗೋವಾ ಮದ್ಯಕ್ಕೆ ಎಲ್ಲಿಲ್ಲದ ಬೇಡಿಕೆ. ಶುರುವಾಗಿದೆ.
BREAKING NEWS: ವಯೋಸಹಜ ಕಾಯಿಲೆಯಿಂದ ಹಿರಿಯ ಪತ್ರಕರ್ತ, ಸಾಹಿತಿ ಎಂ.ಎಸ್ ಪ್ರಭಾಕರ್ ಇನ್ನಿಲ್ಲ
ಹೀಗಾಗಿ ಅಕ್ರಮ ಮದ್ಯ ಸಾಗಾಟದಾರರು ಗೋವಾದಿಂದ ಅಕ್ರಮವಾಗಿ ಕರ್ನಾಟಕದತ್ತ ಗೋವಾ ಮದ್ಯ ಸಾಗಾಟ ಮಾಡಿ ಕೋಟಿ ಕೋಟಿ ಹಣ ಮಾಡುತ್ತಾರೆ. ಈ ಬಗ್ಗೆ ಎಚ್ಚೆತ್ತುಕೊಂಡು ದಾಳಿ ಮಾಡಿರುವ ಅಬಕಾರಿ ಇಲಾಖೆ ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮದ್ಯ ವಶಕ್ಕೆ ಪಡೆದಿದೆ.ಇದೀಗ ಹೊಸ ವರ್ಷದ ಸಂಭ್ರಮಕ್ಕಾಗಿ ಬೆಂಗಳೂರು ಹಾಗೂ ಹೊನ್ನಾವರ ಭಾಗಕ್ಕೆ ದಾಖಲೆ ರಹಿತವಾಗಿ ಸಾಗಾಟ ಮಾಡುತಿದ್ದ ಗೋವಾ ಮದ್ಯವನ್ನು ಗೋವಾ-ಕರ್ನಾಟಕ ಗಡಿ ಭಾಗದ ಮಾಜಾಳಿಯಲ್ಲಿ ಕಾರವಾರದ ಅಬಕಾರಿ ಅಧಿಕಾರಿಗಳು ಸೀಜ್ ಮಾಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ಕು ಜನರನ್ನು ವಶಕ್ಕೆ ಪಡೆದಿದ್ದಾರೆ.
ಮೊದಲ ಪ್ರಕರಣದಲ್ಲಿ ಹೊನ್ನಾವರ ಮೂಲದ ಮೂವರನ್ನು ವಶಕ್ಕೆ ಪಡೆದಿದ್ದು, ಈ ಪ್ರಕರಣದಲ್ಲಿ ಮದ್ಯ ಸಾಗಾಟಕ್ಕೆ ಬಳಸಿದ ಕಾರ್ ಹಾಗೂ 30.25 ಲೀಟರ್ ವಿವಿಧ ಬ್ರಾಂಡ್ನ ಮದ್ಯ ವಶಪಡಿಸಿಕೊಂಡು 12 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.