ಬೆಂಗಳೂರು: ಹೊಸ ವರ್ಷದ ಸಂಭ್ರಮದ ದಿನವಾದಂತ ( New Year 2023 ) ಡಿಸೆಂಬರ್ 31ರಂದು ಮುಂಜಾನೆ 2 ಗಂಟೆಯವರೆಗೆ ನಮ್ಮ ಮೆಟ್ರೋ ರೈಲು ಸಂಚಾರದ ( Namma Metro Train Service ) ವ್ಯವಸ್ಥೆಯನ್ನು ವಿಸ್ತರಣೆ ಮಾಡಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಆರ್ ಸಿಎಲ್ ( BMRCL ) ಮಾಹಿತಿ ನೀಡಿದ್ದು, ಹೊಸ ವರ್ಷದ ಆಚರಣೆಯ ( New Year Celebration 2023 ) ಸಂದರ್ಭದಲ್ಲಿ ಎಲ್ಲಾ ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸೇವೆಯನ್ನು ದಿನಾಂಕ 31-12-2022ರ ರಾತ್ರಿಯಿಂದ ದಿನಾಂಕ 01-01-2023ರ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಿರೋದಾಗಿ ತಿಳಿಸಿದೆ.
ಡಿಸೆಂಬರ್ 31 ರಾತ್ರಿ 15 ನಿಮಿಷಗಳಿಗೊಮ್ಮೆ ನಮ್ಮ ಮೆಟ್ರೋ ರೈಲುಗಳು ( Namma Metro Train ) ಸಂಚರಿಸಲಿದ್ದಾವೆ. ದಿನಾಂಕ 01-01-2023ರ ಮುಂಜಾನೆ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳ ಸಂಚಾರ ಬೈಯಪ್ಪನಹಳ್ಲಿ-1.35ಗಂಟೆಗೆ, ಕೆಂಗೇರಿ-1.25, ನಾಗಸಂದ್ರ-1.30 ಹಾಗೂ ರೇಷ್ಮೆ ಸಂಸ್ಥೆಯಿಂದ 1.25 ಗಂಟೆಗೆ ಹೊರಡಲಿದೆ ಎಂದಿದೆ.
ಇನ್ನೂ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ನಿಂದ ದಿನಾಂಕ 01-01-2023ರ ಮುಂಜಾನೆ 2 ಗಂಟೆಗೆ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ಮೆಟ್ರೋ ರೈಲು ಹೊರಡುತ್ತದೆ ಎಂದು ತಿಳಿಸಿದೆ.
3 ಕೋಟಿ ‘ಭಾರತೀಯ ರೈಲ್ವೆ ಬಳಕೆದಾರ’ರ ಡೇಟಾ ಸೋರಿಕೆ | Indian Railway Data leak
BREAKING NEWS: ವಾಣಿಜ್ಯ ಚಟುವಟಿಕೆಗಳಿಗೆ ಬಿಬಿಎಂಪಿ ಹೊಸ ರೂಲ್ಸ್; ಪಿಜಿ, ಹೋಟೆಲ್,ಬೇಕರಿಗಳಿಗೆ ನೋಟಿಸ್