ಬೆಂಗಳೂರು: ಜೆಡಿಎಸ್ ಪಕ್ಷದ ಪಂಚರತ್ನ ಪ್ರಮೋಶನ್ ಯಾತ್ರೆ ( jds pancharatna yatra ) ಎಂದರೆ ಜನಪರ ಅಭಿವೃದ್ಧಿಯ ಯಾತ್ರೆಯಲ್ಲ. ಅದು ಅವರ ಕುಟುಂಬದ 5 (ಪಂಚ) ಜನರನ್ನು ಪ್ರಮೋಶನ್ ಮಾಡುವ ಯಾತ್ರೆ. ಇದು ಜನರಿಗೆ ಅರ್ಥವಾದ ಕಾರಣಕ್ಕೆ ಪಂಚರತ್ನ ಯಾತ್ರೆ, ಪಂಚರ್ ಆಗಿದೆ ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ಟ್ವಿಟ್ ನಲ್ಲಿ ಸರಣಿ ಟ್ವಿಟ್ ನಲ್ಲಿ ವ್ಯಂಗ್ಯವಾಡಿದೆ.
ಜೆಡಿಎಸ್ ಪಕ್ಷದ ಪಂಚರತ್ನ ಪ್ರಮೋಶನ್ ಯಾತ್ರೆ ಎಂದರೆ ಜನಪರ ಅಭಿವೃದ್ಧಿಯ ಯಾತ್ರೆಯಲ್ಲ. ಅದು ಅವರ ಕುಟುಂಬದ 5 (ಪಂಚ) ಜನರನ್ನು ಪ್ರಮೋಶನ್ ಮಾಡುವ ಯಾತ್ರೆ. ಇದು ಜನರಿಗೆ ಅರ್ಥವಾದ ಕಾರಣಕ್ಕೆ ಪಂಚರತ್ನ ಯಾತ್ರೆ, ಪಂಚರ್ ಆಗಿದೆ.#OldMysuruWelcomesAmitShah
1/9— BJP Karnataka (@BJP4Karnataka) December 29, 2022
ಹಳೆಯ ಮೈಸೂರು ಭಾಗಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿ ಟ್ವಿಟ್ ಮಾಡಿದ್ದು, ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲಾ ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರ್, ಹೆಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಹೀಗೆ ಜೆಡಿಎಸ್ ನ ಐವರು ಜನರನ್ನು ಪ್ರಮೋಶನಮ್ ಮಾಡಲು ಆಯೋಜಿಸಿದ ಯಾತ್ರೆ ಎಂದು ಟೀಕಿಸಿದೆ.
ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲಾ @hd_kumaraswamy @Nikhil_Kumar_k @hd_revanna@iPrajwalRevanna @iSurajRevanna
ಹೀಗೆ ಜೆಡಿಎಸ್ನ 5 ಜನರನ್ನು ಪ್ರಮೋಶನ್ ಮಾಡಲು ಆಯೋಜಿಸಿದ ಯಾತ್ರೆ.#OldMysuruWelcomesAmitShah
2/9— BJP Karnataka (@BJP4Karnataka) December 29, 2022
ಜನರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಹೆಚ್ ಡಿ ಕುಮಾರಸ್ವಾಮಿ ಎತ್ತಿದ ಕೈ. ರಾಜಕೀಯವನ್ನು ಫ್ಯಾಮಿಲಿ ಬಿಸ್ನೆಸ್ ಮಾಡಿಕೊಂಡಿರುವ ಜೆಡಿಎಸ್ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದು ಈಗಾಗಲೇ ಸಾಬೀತುಪಡಿಸಿದೆ. ಇವರ ಕಪಟ ಬುದ್ಧಿಗೆ ಸಿಲುಕಿ ತತ್ತರಿಸುತ್ತಿರುವವರು ಮಂಡ್ಯ ಜನತೆ ಎಂದು ವಾಗ್ಧಾಳಿ ನಡೆಸಿದೆ.
ಜನರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ @hd_kumaraswamy ಎತ್ತಿದ ಕೈ. ರಾಜಕೀಯವನ್ನು ಫ್ಯಾಮಿಲಿ ಬಿಸ್ನೆಸ್ ಮಾಡಿಕೊಂಡಿರುವ @JanataDal_S ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದು ಈಗಾಗಲೇ ಸಾಬೀತುಪಡಿಸಿದೆ. ಇವರ ಕಪಟ ಬುದ್ಧಿಗೆ ಸಿಲುಕಿ ತತ್ತರಿಸುತ್ತಿರುವವರು ಮಂಡ್ಯ ಜನತೆ.#OldMysuruWelcomesAmitShah
3/9— BJP Karnataka (@BJP4Karnataka) December 29, 2022
ಮುಗ್ದ ಮನಸ್ಸಿನ ಮಂಡ್ಯ ಜನರ ಒಳ್ಳೆಯತನವನ್ನೇ ದಡ್ಡತನವೆಂದು ತಿಳಿದುಕೊಂಡ ಹೆಚ್ ಡಿ ಕುಮಾರಸ್ವಾಮಿ, ಇಡೀ ಜಿಲ್ಲೆಯಲ್ಲಿ ಮಾಡಿದ್ದು ಹಗಲು ದರೋಡೆ. 2018ರಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಮಂಡ್ಯದ ಜನತೆಗೆ ಜೆಡಿಎಸ್ ಹೇಳಿಕೊಳ್ಳುವುದಕ್ಕಾದರೂ ಒಂದು ಒಳ್ಳೆಯ ಕೆಲಸ ಮಾಡಲಿಲ್ಲ ಎಂದು ಹೇಳಿದೆ.
ಮುಗ್ದ ಮನಸ್ಸಿನ ಮಂಡ್ಯ ಜನರ ಒಳ್ಳೆಯತನವನ್ನೇ ದಡ್ಡತನವೆಂದು ತಿಳಿದುಕೊಂಡ @hd_kumaraswamy ಇಡೀ ಜಿಲ್ಲೆಯಲ್ಲಿ ಮಾಡಿದ್ದು ಹಗಲು ದರೋಡೆ. 2018ರಲ್ಲಿ ಏಳಕ್ಕೆ ಏಳೂ ಕ್ಷೇತ್ರಗಳನ್ನು ಗೆಲ್ಲಿಸಿಕೊಟ್ಟ ಮಂಡ್ಯದ ಜನತೆಗೆ @JanataDal_S ಹೇಳಿಕೊಳ್ಳುವುದಕ್ಕಾದರೂ ಒಂದು ಒಳ್ಳೆಯ ಕೆಲಸ ಮಾಡಲಿಲ್ಲ. #OldMysuruWelcomesAmitShah
4/9— BJP Karnataka (@BJP4Karnataka) December 29, 2022
ಅನ್ಯಾಯ ಮತ್ತು ನಂಬಿಕೆ ದ್ರೋಹವನ್ನು ಮಂಡ್ಯದ ಜನರು ಎಂದಿಗೂ ಸಹಿಸರು. ಹಾಗಾಗಿ 2019ರ ಉಪಚುನಾವಣೆಯಲ್ಲಿ ಕೆ. ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿಸಿ ಬಿಜೆಪಿಗೆ ಗೆಲುವಿನ ಮಾಲೆ ಹಾಕಿದರು. ಎರಡೂ ಪಕ್ಷಗಳ ಕೆಲಸಗಳನ್ನು ಜಿಲ್ಲೆಯ ಇತರೆ ಆರೂ ಕ್ಷೇತ್ರಗಳ ಮತದಾರರು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ ಎಂದಿದೆ.
ಅನ್ಯಾಯ ಮತ್ತು ನಂಬಿಕೆ ದ್ರೋಹವನ್ನು ಮಂಡ್ಯದ ಜನರು ಎಂದಿಗೂ ಸಹಿಸರು. ಹಾಗಾಗಿ 2019ರ ಉಪಚುನಾವಣೆಯಲ್ಲಿ ಕೆ. ಆರ್.ಪೇಟೆಯಲ್ಲಿ @JanataDal_S ಸೋಲಿಸಿ ಬಿಜೆಪಿಗೆ ಗೆಲುವಿನ ಮಾಲೆ ಹಾಕಿದರು. ಎರಡೂ ಪಕ್ಷಗಳ ಕೆಲಸಗಳನ್ನು ಜಿಲ್ಲೆಯ ಇತರೆ ಆರೂ ಕ್ಷೇತ್ರಗಳ ಮತದಾರರು ಪಟ್ಟಿ ಮಾಡಿಟ್ಟುಕೊಂಡಿದ್ದಾರೆ. #OldMysuruWelcomesAmitShah
5/9— BJP Karnataka (@BJP4Karnataka) December 29, 2022
ಹಳೇ ಮೈಸೂರು ಭಾಗದ ಮೇಲೆಯೇ ಜೆಡಿಎಸ್ ಗೆ ಯಾಕಿಷ್ಟು ಢೋಂಗಿ ಅಕ್ಕರೆ ಎಂದರೆ ಈ ಭಾಗವೇ ಆ ಪಕ್ಷದ ಪಾಲಿಗೆ ಕರೆಯುವ ಹಸು. ಕಣ್ಣೀರು ಸುರಿಸಿ ಜನರ ನಂಬಿಕೆ ಜತೆ ಆಡುವ ಕಲೆ ಪಕ್ಷಕ್ಕೆ ಕರಗತವಾಗಿದೆ. ಯೋಜನೆಗಳ ಹೆಸರು ಹೇಳಿ ಹಣ ಮಾಡಿಕೊಳ್ಳುತ್ತಿರುವುದರಿಂದಲೇ ಅಭಿವೃದ್ಧಿ ಎಂಬುದು ಈ ಭಾಗಕ್ಕೆ ಮರಿಚೀಕೆ ಎಂದು ಭವಿಷ್ಯ ನುಡಿದಿದೆ.
ಹಳೇ ಮೈಸೂರು ಭಾಗದ ಮೇಲೆಯೇ @JanataDal_Sಗೆ ಯಾಕಿಷ್ಟು ಢೋಂಗಿ ಅಕ್ಕರೆ ಎಂದರೆ ಈ ಭಾಗವೇ ಆ ಪಕ್ಷದ ಪಾಲಿಗೆ ಕರೆಯುವ ಹಸು. ಕಣ್ಣೀರು ಸುರಿಸಿ ಜನರ ನಂಬಿಕೆ ಜತೆ ಆಡುವ ಕಲೆ ಪಕ್ಷಕ್ಕೆ ಕರಗತವಾಗಿದೆ. ಯೋಜನೆಗಳ ಹೆಸರು ಹೇಳಿ ಹಣ ಮಾಡಿಕೊಳ್ಳುತ್ತಿರುವುದರಿಂದಲೇ ಅಭಿವೃದ್ಧಿ ಎಂಬುದು ಈ ಭಾಗಕ್ಕೆ ಮರಿಚೀಕೆ.#OldMysuruWelcomesAmitShah
6/9— BJP Karnataka (@BJP4Karnataka) December 29, 2022
ಆದರೆ, ಬಿಜೆಪಿಗೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದರೂ ಜೆಡಿಎಸ್ ಗಿಂತ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿಗೆ ಜನ ಮೆಚ್ಚಿದ್ದಾರೆ ಎಂದು ತಿಳಿಸಿದೆ.
ಆದರೆ, ಬಿಜೆಪಿಗೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ. ಹಳೇ ಮೈಸೂರು ಭಾಗದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದರೂ @JanataDal_S ಗಿಂತ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿಗೆ ಜನ ಮೆಚ್ಚಿದ್ದಾರೆ.#OldMysuruWelcomesAmitShah
7/9— BJP Karnataka (@BJP4Karnataka) December 29, 2022
ಭಾಗದ ಪ್ರಮುಖ ಸಮುದಾಯಗಳು ಈಗ ಜೆಡಿಎಸ್ ವಿರುದ್ಧ ತಿರುಗಿಬಿದ್ದಿವೆ ಎಂಬುದನ್ನು ಹೆಚ್ ಡಿ ಕುಮಾರಸ್ವಾಮಿ ಅರ್ಥ ಮಾಡಿಕೊಂಡಿದ್ದಾರೆ.ಹಾಗಾಗಿಯೇ, ತುಷ್ಟೀಕರಣದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ತುಷ್ಟೀಕರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಪಂಚರತ್ನ ಯಾತ್ರೆಯಲ್ಲಿ ಅವರನ್ನು ಹೊರುವ ರಥದ ಹೆಸರೇ ಸಾಕ್ಷಿ ಎಂದು ಹೇಳಿದೆ.
ಭಾಗದ ಪ್ರಮುಖ ಸಮುದಾಯಗಳು ಈಗ @JanataDal_S ವಿರುದ್ಧ ತಿರುಗಿಬಿದ್ದಿವೆ ಎಂಬುದನ್ನು @hd_kumaraswamy ಅರ್ಥ ಮಾಡಿಕೊಂಡಿದ್ದಾರೆ.ಹಾಗಾಗಿಯೇ, ತುಷ್ಟೀಕರಣದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ತುಷ್ಟೀಕರಣ ಯಾವ ಮಟ್ಟದಲ್ಲಿದೆ ಎಂಬುದಕ್ಕೆ ಪಂಚರತ್ನ ಯಾತ್ರೆಯಲ್ಲಿ ಅವರನ್ನು ಹೊರುವ ರಥದ ಹೆಸರೇ ಸಾಕ್ಷಿ.#OldMysuruWelcomesAmitShah
8/9— BJP Karnataka (@BJP4Karnataka) December 29, 2022
ತಾನು ಮಾಡಿದ ದ್ರೋಹದ ಫಲವಾಗಿ ಮಂಡ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಕೈ ಹಿಡಿಯಲ್ಲ ಎಂಬುದನ್ನು ಹೆಚ್ ಡಿ ಕುಮಾರಸ್ವಾಮಿ ಅರ್ಥಮಾಡಿಕೊಂಡಿದ್ದಾರೆ. ಜಾತ್ಯಾತೀತ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುವ ಆಟವನ್ನು ಹಳೇ ಮೈಸೂರು ಭಾಗದ ಜನ ಅರಿತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನೂ ಕಲಿಸುತ್ತಾರೆ ಎಂದು ತಿಳಿಸಿದೆ.
ತಾನು ಮಾಡಿದ ದ್ರೋಹದ ಫಲವಾಗಿ ಮಂಡ್ಯದ ಜನತೆ ಮುಂದಿನ ಚುನಾವಣೆಯಲ್ಲಿ ಕೈ ಹಿಡಿಯಲ್ಲ ಎಂಬುದನ್ನು @hd_kumaraswamy ಅರ್ಥಮಾಡಿಕೊಂಡಿದ್ದಾರೆ. ಜಾತ್ಯಾತೀತ ಹೆಸರಿನಲ್ಲಿ ಜಾತಿ ರಾಜಕಾರಣ ಮಾಡುವ ಆಟವನ್ನು ಹಳೇ ಮೈಸೂರು ಭಾಗದ ಜನ ಅರಿತಿದ್ದಾರೆ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠವನ್ನೂ ಕಲಿಸುತ್ತಾರೆ.#OldMysuruWelcomesAmitShah
9/9— BJP Karnataka (@BJP4Karnataka) December 29, 2022