ಬೆಂಗಳೂರು: ನಗರದಲ್ಲಿ ಮತಾಂತರ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
BREAKING NEWS: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಸಾವರ್ಕರ್ ಫೋಟೋ ಅನಾವರಣ; ಖೈದಿಗಳ ಜತೆ ಗೃಹಸಚಿವರ ಸಂವಾದ
ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಯತ್ನಿಸಿದ ಆರೋಪದಡಿಯಲ್ಲಿ ಬೆಂಗಳೂರಿನಲ್ಲಿ ಆಂಧ್ರದ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಆಂಧ್ರ ಮೂಲದ ವಿಜಯ್, ಶೃತಿ, ನೆಲ್ಸನ್ ವಿರುದ್ಧ ಜೆ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಿ.ಎಸ್. ಗಾರ್ಡನ್ನಲ್ಲಿ ಹಿಂದೂಗಳಿಗೆ ತೆಲುಗು ಭಾಷೆಯಲ್ಲಿದ್ದ ಏಸುಕ್ರಿಸ್ತನ ಕರಪತ್ರ ಹಂಚಿ ಹಣದ ಆಮಿಷವೊಡ್ಡಿ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡಿ ಮತಾಂತರ ಮಾಡಲು ಯತ್ನ ನಡೆದಿದೆ. ಈ ಬಗ್ಗೆ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಮುಖಂಡರಾದ ಎಮ್ಎಲ್ ಶಿವ ಕುಮಾರ್, ಪವನ್ ಮತ್ತು ಹರ್ಷ ಮುತಾಲಿಕ್ ಮುಂತದಾವರು ದೂರು ನೀಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿದವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.