ಕೇರಳ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (Popular Front of India -PFI) ನಾಯಕರನ್ನು ಗುರಿಯಾಗಿಸಿಕೊಂಡು ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency – NIA) ಗುರುವಾರ ಮುಂಜಾನೆ ಕೇರಳದಾದ್ಯಂತ 28 ಸ್ಥಳಗಳಲ್ಲಿ ದಾಳಿಯನ್ನು ನಡೆಸಿದೆ.
ಈ ಸಂಘಟನೆಯನ್ನು ಬೇರೊಂದು ಹೆಸರಿನಲ್ಲಿ ಮರುಸಂಘಟಿಸಲು ಪಿಎಫ್ಐ ನಾಯಕರು ಯೋಜಿಸಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರ್ನಾಕುಲಂನಲ್ಲಿ ನಿಷೇಧಿತ ಪಿಎಫ್ಐ ಮುಖಂಡರಿಗೆ ಸಂಬಂಧಿಸಿದ ಎಂಟು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದ್ದು, ತಿರುವನಂತಪುರಂನಲ್ಲಿ ಆರು ಸ್ಥಳಗಳ ಮೇಲೂ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯು ಮುಂಜಾನೆ 4 ಗಂಟೆಗೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಇದೀಗ ಶೋಧಕಾರ್ಯ ಮುಂದುವರೆದಿದೆ.
2006 ರಲ್ಲಿ ಕೇರಳದಲ್ಲಿ ಪಿಎಫ್ಐ ಅನ್ನು ಸ್ಥಾಪಿಸಲಾಯಿತು ಮತ್ತು ಅದು 2009 ರಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ರಂಗವನ್ನು ಸಹ ಸ್ಥಾಪಿಸಿತು. ನಂತರ ದೇಶದ ವಿವಿಧ ಭಾಗಗಳಿಗೆ ತನ್ನ ಕಬಂಧಬಾಹುಗಳನ್ನು ಹರಡಿದ ಕೇರಳ ಮೂಲದ ಮೂಲಭೂತವಾದಿ ಸಂಘಟನೆಯನ್ನು ಕೇಂದ್ರ ಸರ್ಕಾರವು ಈ ವರ್ಷದ ಸೆಪ್ಟೆಂಬರ್ನಲ್ಲಿ ನಿಷೇಧಿಸಿತ್ತು.
BIGG NEWS : ಕೇಂದ್ರ ಸರ್ಕಾರದಿಂದ ‘ಹಳೆ ವಾಹನ ಮಾರಾಟ & ಖರೀದಿ’ ನಿಯಮ ಬದಲಾವಣೆ ; ಹೊಸ ರೂಲ್ಸ್ ಹೀಗಿವೆ.!
ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: 42,000 ಪೌರ ನೌಕರರ ಖಾಯಂ, 2 ಸಾವಿರ ಸಂಕಷ್ಟ ಭತ್ಯೆ – ಸಿಎಂ ಬೊಮ್ಮಾಯಿ
Covid19: ಇನ್ನೂ ದಿನಗಳ ಕಾಲ ಎಚ್ಚರ ವಹಿಸಿ: ಜನವರಿಯಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ – ಕೇದ್ರ ಆರೋಗ್ಯ ಸಚಿವಾಲಯ