ಬೆಂಗಳೂರು: ನಾಡಧ್ವಜವನ್ನು 60ರ ದಶಕದ ಆರಂಭದಲ್ಲೇ ಬೆಂಗಳೂರಿನಲ್ಲಿ ಮೊದಲ ಬಾರಿಗೆ ವಿನ್ಯಾಸಗೊಳಿಸಿದವರು ರಾಮಮೂರ್ತಿ. ಇಂತಹ ರಾಮಮೂರ್ತಿಯವರ ಪತ್ನಿಗೇ ವೃದ್ಧಾಪ್ಯ ವೇತನ ನಿರಾಕರಿಸಿರೋ ಪ್ರಕರಣ, ಇದೀಗ ಬೆಳಕಿಗೆ ಬಂದಿದೆ.
ಹೌದು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಹಳದಿ-ಕೆಂಪು ಬಣ್ಣದ ಕನ್ನಡ ಧ್ವಜವನ್ನು ವಿನ್ಯಾಸಗೊಳಿಸಿದವರು ರಾಮಮೂರ್ತಿಯಾಗಿದ್ದಾರೆ. ಇವರ ಪತ್ನಿ ಕಮಲಮ್ಮ ರಾಮಮೂರ್ತಿ (95) ಹಿರಿಯ ವಯಸ್ಸಿನ ಜೀವವಾಗಿದ್ದಾರೆ.
ಇಂತಹ ಕಮಲಮ್ಮ ವೃದ್ಧಾಪ್ಯ ವೇತನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಿದಂತ ಅರ್ಜಿಯನ್ನು ಇಲಾಖೆ ತಿರಸ್ಕರಿಸಿದೆ. ಈ ಮೂಲಕ ವೃದ್ಧಾಪ್ಯ ವೇತನ ನೀಡೋದಕ್ಕೆ ನಿರಾಕರಿಸಿದೆ.
ಅಂದಹಾಗೇ ರಾಮಮೂರ್ತಿ ನಿಧನಾನಂತ್ರ, ಅವರ ಪತ್ನಿ ಕಮಲಮ್ಮ ಅನಾಥರಾಗಿದ್ದಾರೆ. ಈಗ ಇವರಿಗೆ ಸಹಾಯದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೃದ್ಧಾಪ್ಯ ವೇತನ ನಿರಾಕರಿಸಿರೋದು ಮತ್ತಷ್ಟು ಸಂಕಷ್ಟವನ್ನು ಇಳಿ ವಯಸ್ಸಿನ ಜೀವಕ್ಕೆ ತಂದಿಟ್ಟಂತೆ ಆಗಿದೆ.
ಇನ್ನೂ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು, ಕಮಲಮ್ಮನಿಗೆ ವೃದ್ಧಾಪ್ಯ ವೇತನ, ಆರ್ಥಿಕ ನೆರವು, ಅನಾರೋಗ್ಯದ ಚಿಕಿತ್ಸೆಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: 42,000 ಪೌರ ನೌಕರರ ಖಾಯಂ, 2 ಸಾವಿರ ಸಂಕಷ್ಟ ಭತ್ಯೆ – ಸಿಎಂ ಬೊಮ್ಮಾಯಿ
Covid19: ಇನ್ನೂ ದಿನಗಳ ಕಾಲ ಎಚ್ಚರ ವಹಿಸಿ: ಜನವರಿಯಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ – ಕೇದ್ರ ಆರೋಗ್ಯ ಸಚಿವಾಲಯ