ಚಿಕ್ಕಮಗಳೂರು: ಅನಾರೋಗ್ಯದಿಂದಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದಂತ ಗಂಡು ಮಗುವೊಂದು ಸಾವನ್ನಪ್ಪಿರುವ ಘಟನೆ, ಚಿಕ್ಕಮಗಳೂರಿನಲ್ಲಿ ನಡೆದಿದೆ. ಹೀಗೆ ಮಗು ಸಾವನ್ನಪ್ಪಲು ವೈದ್ಯರು, ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ. ಸಂಬಂಧಿಸಿದಂತವರ ವಿರುದ್ಧ ಕ್ರಮಕ್ಕೆ ಪೋಷಕರು ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ಮೀನಾಕ್ಷಿ ಹಾಗೂ ಗೋಪಾಲ್ ಎಂಬುವರ ದಂಪತಿಗಳ ನಾಲ್ಕು ತಿಂಗಳ ಗಂಡು ಮಗು ಮಧುವಿಗೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ಸೂಚನೆಯನ್ನು ಮೀರಿ ಸಿಬ್ಬಂದಿಗಳು ಟ್ರೀಟ್ಮೆಂಟ್ ಮಾಡಿದ್ದರ ಕಾರಣ ನಾಲ್ಕು ತಿಂಗಳ ಮಗು ಸಾವನ್ನಪ್ಪಿದೆ ಎಂಬುದಾಗಿ ಆರೋಪಿಸಲಾಗಿದೆ.
ಮಗು ಸಾವನ್ನಪ್ಪಿದಂತ ಸುದ್ದಿ ತಿಳಿದು ಆಸ್ಪತ್ರೆ ಮುಂದೆ ಜಮಾಯಿಸಿದಂತ ಪೋಷಕರ ಸಂಬಂಧಿಕರು ವೈದ್ಯರು ಹಾಗೂ ಸಿಬ್ಬಂದಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಮಗುವಿನ ಸಾವಿನ ಬಳಿಕ ವೈದ್ಯರು ಮತ್ತು ಸಿಬ್ಬಂದಿ ಹಿಂಬಾಗಿಲಿನಿಂದ ಎಸ್ಕೇಫ್ ಆಗಿದ್ದಾರೆ ಎನ್ನಲಾಗಿದೆ.
ಮಗುವಿನ ಸಾವಿಗೆ ಕಾರಣವಾದಂತ ವೈದ್ಯರು, ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇದು ಅವರ ನಿರ್ಲಕ್ಷ್ಯದಿಂದ ಉಂಟಾದಂತ ಸಾವು ಆಗಿದೆ ಎಂಬುದಾಗಿ ಪೋಷಕರು, ಸಂಬಂಧಿಕರು ಆಗ್ರಹಿಸಿದ್ದಾರೆ.
ಪೌರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್: 42,000 ಪೌರ ನೌಕರರ ಖಾಯಂ, 2 ಸಾವಿರ ಸಂಕಷ್ಟ ಭತ್ಯೆ – ಸಿಎಂ ಬೊಮ್ಮಾಯಿ
Covid19: ಇನ್ನೂ ದಿನಗಳ ಕಾಲ ಎಚ್ಚರ ವಹಿಸಿ: ಜನವರಿಯಲ್ಲಿ ಕೋವಿಡ್ ಹೆಚ್ಚಳ ಸಾಧ್ಯತೆ – ಕೇದ್ರ ಆರೋಗ್ಯ ಸಚಿವಾಲಯ