ಆಂಧ್ರಪ್ರದೇಶ: ನೆಲ್ಲೂರು ಜಿಲ್ಲೆಯ ಕಂದುಕೂರಿನಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ರೋಡ್ ಶೋ ವೇಳೆ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದುರಂತದಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಎಪಿ ಸರ್ಕಾರದ ಅಧಿಕಾರಿಗಳು ದಿ ಕ್ವಿಂಟ್ಗೆ ತಿಳಿಸಿದ್ದಾರೆ.
Seven persons died in a stampede at N Chandrababu Naidu’s public political event at Kandukuru in AP on Wednesday evening, AP State authorities confirm. Several, according to the state medical authorities, are found to be injured so far. @TheQuint pic.twitter.com/gd9L6yF5WW
— Nikhila Henry (@NikhilaHenry) December 28, 2022
ಈ ಕುರಿತು ಹೇಳಿಕೆ ನೀಡಿರುವ ಟಿಡಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ನಾಯ್ಡು ಅವರ ಪುತ್ರ ನಾರಾ ಲೋಕೇಶ್, ‘ಟಿಡಿಪಿ ಕಾರ್ಯಕರ್ತರ ಸಾವು ಪಕ್ಷಕ್ಕೆ ತುಂಬಲಾರದ ನಷ್ಟ, ಅವರ ಕುಟುಂಬಕ್ಕೆ ನನ್ನ ತೀವ್ರ ಸಂತಾಪಗಳು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ನಾವು ವ್ಯವಸ್ಥೆ ಮಾಡಿದ್ದೇವೆ. ಅವರು ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ತೆಲುಗು ದೇಶಂ ಪಕ್ಷವು ಮೃತರ ಕುಟುಂಬಗಳಿಗೆ ಎಲ್ಲಾ ರೀತಿಯಲ್ಲಿ ಬೆಂಬಲ ನೀಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.
Seven persons who attended TDP leader and former CM of AP N Chandrababu Naidu’s public political event in Kandukuru in AP died in a stampede, say AP state government authorities. Several are injured. @TheQuint pic.twitter.com/H3Wrb64I4k
— Nikhila Henry (@NikhilaHenry) December 28, 2022