ನವದೆಹಲಿ: ಅಹ್ಮದಾಬಾದ್’ನಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹಾರೈಸಿದ್ದಾರೆ.
“ತಾಯಿ ಮತ್ತು ಮಗನ ನಡುವಿನ ಬಂಧವು ನಿಜವಾಗಿಯೂ ಅಮೂಲ್ಯವಾಗಿದೆ. ಮೋದಿ ಜೀ, ಇಂತಹ ಕಷ್ಟದ ಸಮಯದಲ್ಲಿ ನಾನು ನಿಮಗೆ ನನ್ನ ಪ್ರೀತಿ ಮತ್ತು ಬೆಂಬಲವನ್ನ ನೀಡುತ್ತೇನೆ. ನಿಮ್ಮ ತಾಯಿ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
एक मां और बेटे के बीच का प्यार अनन्त और अनमोल होता है।
मोदी जी, इस कठिन समय में मेरा प्यार और समर्थन आपके साथ है। मैं आशा करता हूं आपकी माताजी जल्द से जल्द स्वस्थ हो जाएं।
— Rahul Gandhi (@RahulGandhi) December 28, 2022
ಪ್ರಧಾನಿಯವರ ತಾಯಿಯನ್ನು ಪ್ರಸ್ತುತ ಯುಎನ್ ಮೆಹ್ತಾ ಆಸ್ಪತ್ರೆಯ ಹೃದ್ರೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
Viral Video : ಮೀನು ತಿನ್ನುವ ಆಸೆಯಿಂದ ಮಾರ್ಗ ಮಧ್ಯೆ ‘ರೈಲು’ ನಿಲ್ಲಿಸಿದ ಚಾಲಕ, ವಿಡಿಯೋ ವೈರಲ್
ಕೋಲಾರದಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ದಾಳಿ : ರಕ್ತ ಬರುವಂತೆ ಹಲ್ಲೆ ನಡೆಸಿದ ಸೈಕೋಪಾತ್..!