ಮುಂಬೈ: ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ (loan fraud case) ಚಂದಾ ಕೊಚ್ಚಾರ್, (Chanda Kochhar) ದೀಪಕ್ ಕೊಚ್ಚರ್(Deepak Kochhar) ಮತ್ತು ವೇಣುಗೋಪಾಲ್ ಧೂತ್(Venugopal Dhoot) ಅವರನ್ನು ಮುಂಬೈ ನ್ಯಾಯಾಲಯ ಮತ್ತೆರಡು ದಿನಗಳ ಸಿಬಿಐ ಕಸ್ಟಡಿಗೆ ನೀಡಿದೆ.
ಕೊಚ್ಚರ್ ದಂಪತಿಯನ್ನು ಡಿಸೆಂಬರ್ 24 ರಂದು ನವದೆಹಲಿಯಲ್ಲಿ ಸಿಬಿಐ(CBI) ಬಂಧಿಸಿತ್ತು. ಧೂತ್ ಅವರನ್ನು ಡಿಸೆಂಬರ್ 26 ರಂದು ಬಂಧಿಸಲಾಗಿತ್ತು. ಮುಂಬೈ ವಿಶೇಷ ಸಿಬಿಐ ನ್ಯಾಯಾಧೀಶ ಎಎಸ್ ಸಯ್ಯದ್ ಅವರು ಬುಧವಾರದವರೆಗೆ ಕಸ್ಟಡಿಗೆ ಒಪ್ಪಿಸಿದೆ.
2012 ರಲ್ಲಿ ವಿಡಿಯೋಕಾನ್ ಗ್ರೂಪ್ಗೆ ನೀಡಲಾದ 3,250 ಕೋಟಿ ರೂ. ಐಸಿಐಸಿಐ ಬ್ಯಾಂಕ್ ಸಾಲದಲ್ಲಿ ವಂಚನೆ ಮತ್ತು ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರೆಣೆಗಾಗಿ ಮೂವರನ್ನು ಬಂಧಿಸಲಾಗಿದೆ.
CBI seeks 2 days more custody of Videocon chairman Venugopal Dhoot, Former MD & CEO of ICICI bank Chanda Kochhar & Deepak Kochhar in connection with the ICICI bank -Videocon loan fraud case.
— ANI (@ANI) December 28, 2022
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಆರ್ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕ್ನ ಸಾಲ ನೀತಿಯನ್ನು ಉಲ್ಲಂಘಿಸಿ ವೇಣುಗೋಪಾಲ್ ಧೂತ್ ಅವರು ಪ್ರಮೋಟ್ ಮಾಡಿದ ವಿಡಿಯೋಕಾನ್ ಗ್ರೂಪ್ ಕಂಪನಿಗಳಿಗೆ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂ. ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದೆ ಎಂದು ಸಿಬಿಐ ಆರೋಪಿಸಿದೆ.
ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ‘ಕ್ರಿಮಿನಲ್ ನಂಬಿಕೆ ಉಲ್ಲಂಘನೆ’ ಆರೋಪವನ್ನು ವಿಧಿಸಲು ಅನುಮತಿ ಕೋರಿ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ವರದಿಗಳ ಪ್ರಕಾರ, ಚಂದಾ ಕೊಚ್ಚರ್ (59) ಅವರು ಬ್ಯಾಂಕ್ನ ಸಾಲ ಪದ್ಧತಿಗಳಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ತೈಲ ಮತ್ತು ಅನಿಲ ಪರಿಶೋಧನಾ ಕಂಪನಿಯಾದ ವಿಡಿಯೋಕಾನ್ ಗ್ರೂಪ್ಗೆ ಒಲವು ತೋರಿದ್ದಾರೆ ಎಂಬ ಆರೋಪದ ಮೇಲೆ ಐಸಿಐಸಿಐ ಬ್ಯಾಂಕ್ನ ಸಿಇಒ ಮತ್ತು ಎಂಡಿ ಸ್ಥಾನಕ್ಕೆ ಅಕ್ಟೋಬರ್ 2018 ರಲ್ಲಿ ರಾಜೀನಾಮೆ ನೀಡಿದ್ದರು.
2012 ರಲ್ಲಿ ಐಸಿಐಸಿಐ ಬ್ಯಾಂಕ್ನಿಂದ ವಿಡಿಯೋಕಾನ್ ಗ್ರೂಪ್ 3,250 ಕೋಟಿ ಸಾಲವನ್ನು ಪಡೆದ ತಿಂಗಳ ನಂತರ ಧೂತ್ ನುಪವರ್ ರಿನ್ಯೂವಬಲ್ಸ್ನಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ ಎಂದು ಸಿಬಿಐ ತಿಳಿಸಿದೆ.
ಸಿಬಿಐ, 2019 ರಲ್ಲಿ ಎಫ್ಐಆರ್ ದಾಖಲಿಸಿದ ನಂತರ, ಆರೋಪಿಗಳು ಐಸಿಐಸಿಐ ಬ್ಯಾಂಕ್ಗೆ ವಂಚಿಸಲು ಇತರರೊಂದಿಗೆ ಕ್ರಿಮಿನಲ್ ಪಿತೂರಿಯಲ್ಲಿ ಖಾಸಗಿ ಕಂಪನಿಗಳಿಗೆ ಕೆಲವು ಸಾಲಗಳನ್ನು ಮಂಜೂರು ಮಾಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
BREAKING NEWS : ವಿಧಾನಸಭೆ ಕಲಾಪ ಮಧ್ಯಾಹ್ನ 3 ಗಂಟೆಗೆ ಮುಂದೂಡಿಕೆ |Belagavi Winter Session
BREAKING NEWS : ದೆಹಲಿಗೆ ಬರುವಂತೆ ಬುಲಾವ್ : ಸುರ್ಜೆವಾಲಾ ಭೇಟಿಯಾದ ಶಾಸಕ ಜಮೀರ್
ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿೃವೃದ್ಧಿಗೆ ಆರ್.ವಿ.ದೇಶಪಾಂಡೆ ಅಮೂಲ್ಯ ಕೊಡುಗೆ ನೀಡಿದ್ದಾರೆ : ಸಿಎಂ ಬೊಮ್ಮಾಯಿ