ಬೆಳಗಾವಿ: ಹಳೇ ಮೈಸೂರು ಭಾಗದಲ್ಲಿ ಸಿದ್ದಾಂತದ ಮೂಲಕ ಚುನಾವಣೆ ಎದುರಿಸುತ್ತೇವೆ. ಜಾತಿಯಡಿ ಅಲ್ಲ ಹಿಂದುತ್ವದ ಅಡಿ ಪಕ್ಷ ಬೆಳೆದಿದೆ ಅದೇ ಸಿದ್ದಾಂತದಲ್ಲಿ ಚುನಾವಣಾ ಎದುರಿಸುತ್ತೇವೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಹೇಳಿದ್ದಾರೆ.
UPDATE NEWS: ಶಿವಮೊಗ್ಗದ ಸಾಗರ ಬಳಿ ರಸ್ತೆ ಅಪಘಾತ; ಗಾಯಗೊಂಡಿದ್ದ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಸಾವು
ನಗರದಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಮತ್ತು ಸಿದ್ದಾಂತದ ಅಡಿಯಲ್ಲಿ ಚುನಾವಣೆ ಎದುರಿಸುತ್ತೇವೆ. ಹಳೆ ಮೈಸೂರು ಭಾಗದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. ರಿಪೋರ್ಟ್ ಕಾರ್ಡ್ ಇಡುತ್ತೇವೆ. ದೇವೆಗೌಡರು ಪ್ರಧಾನಿ ಆದಾಗಿನಿಂದಲೂ ಹಾಸನಕ್ಕೆ ವಿಮಾನ ನಿಲ್ದಾಣದ ಕನಸಿತ್ತು. ಆದರೆ ವಿಮಾನ ನಿಲ್ದಾಣ ಆಗಲು ಡಬಲ್ ಇಂಜಿನ ಸರ್ಕಾರ ಬರಬೇಕಾಯಿತು. ಹಾಸನ,ಮಂಡ್ಯ, ಎಲ್ಲ ಕಡೆಯೂ ನಮ್ಮ ರಿಪೋರ್ಟ್ ಕಾರ್ಡ್ ಇದೆ ಅದನ್ನು ಮುಂದಿಡುತ್ತೇವೆ ಎಂದರು.
ಇನ್ನು ಒಳ್ಳೆಯ ಆಟಗಾರ ಯಾವ ಪಿಚ್ನಲ್ಲಾದರೂ ಆಡುತ್ತಾನೆ. ಒಂದೇ ಪಿಚ್ ಆದ್ರೂ ಸರಿ, ಬೇರೆ ಬೇರೆ ಪಿಚ್ ಆದ್ರೂ ಸರಿ. ಅದೇ ರೀತಿ ಅಮಿತ್ ಶಾ ಯಾವ ಪಿಚ್ನಲ್ಲಿಬೇಕಾದ್ರೂ ಆಡುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಇಡೀ ರಾಜ್ಯವನ್ನು ಫೋಕಸ್ ಮಾಡುವುದು ನಮ್ಮ ಗುರಿ ಎಂದರು.