ಬೆಂಗಳೂರು: ಬೆಂಗಳೂರು ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್ಗೆ ಕನ್ನ ಹಾಕಿರುವ ಘಟನೆ ನಡೆದಿದೆ.
BIGG NEWS : ಮಂಡ್ಯ ಕೆಆರ್ಎಸ್ ಡ್ಯಾಂ ಬಳಿ ಬೋನಿಗೆ ಬಿದ್ದ ಚಿರತೆ : ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಗ್ರಾಹಕರು ಕಟ್ಟಿದ ಹಣವನ್ನು ಜಲಮಂಡಳಿಗೆ ನೀಡಿದೆ ವಂಚನೆ ಮಾಡಿರುವ ಘಟನೆ ನಡೆದಿದೆ. ಗ್ರೂಪ್ ಸಿ ಮತ್ತು ಗ್ರೂಪ್ ಡಿ ನೌಕರ ಸೇರಿದಂತೆ ಒಟ್ಟು 9 ಜನರ ಬಂಧನವಾಗಿದೆ. ರೆವಿನ್ಯೂ ಮ್ಯಾನೇಜರ್ ಆಗಿರುವ ಎಫ್ಡಿಎ ನೌಕರ, ಗ್ರೂಪ್ ಡಿ ನೌಕರ, ಐವರು ಗುತ್ತಿಗೆದಾರರನ್ನು ಬೊಮ್ಮನಹಳ್ಳಿ ಪೊಲೀಸರು ಪ್ರಕರಣದ ಸಂಬಂಧ ಬಂಧಿಸಿದ್ದಾರೆ. ಜಸ್ಟ್ ಒಂದೂವರೆ ಕೋಟಿ ರೂ ವಂಚನೆಯಾಗಿದೆ.
ವರದರಾಜು, ಕಿರಣ್ ಕುಮಾರ್, ನಿರ್ಮಲ್ ಕುಮಾರ್, ಚೌಡೇಶ್, ಮಂಜುನಾಥ್, ಮಹದೇವಸ್ವಾಮಿ, ಉಮೇಶ್, ಬಸವರಾಜು ಬಂಧಿತರು. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ. 2018ರಿಂದ 2022ರವರೆಗೆ ಈ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ.