ಹಾಸನ: ಡಿಟಿಡಿಸಿ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ವಿಚ್ಚೇದಿತ ಮಹಿಳೆಯೊಬ್ಬರ ಹಿಂದೆ ಬಿದ್ದ ಯುವಕ ಪ್ರೀತಿಗೆ ಒಲ್ಲೆ ಎಂದ ಆಂಟಿಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳುಹಿಸಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
BREAKING NEWS: ಜಮ್ಮುವಿನಲ್ಲಿ ಭಯೋತ್ಪಾದಕರು-ಭದ್ರತಾ ಪಡೆಗಳ ನಡುವೆ ಎನ್ಕೌಂಟರ್: ಗ್ರೆನೇಡ್ ಸ್ಫೋಟ, ಗುಂಡಿನ ದಾಳಿ
ನಗರದ ಕೆ ಆರ್ ಪುರಂ ಬಡಾವಣೆಯಲ್ಲಿರುವ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಸ್ ಆಗಿದೆ. ಕಚೇರಿ ಮಾಲೀಕ ಶಶಿ ಎಂಬುವರ ಬಲಗೈ ಐದು ಬೆರಳುಗಳು ಸಂಪೂರ್ಣ ತುಂಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಘಟನೆ ಹಿನ್ನೆಲೆ
ಬೆಂಗಳೂರು ಮೂಲದ ಯುವಕನೊಬ್ಬ ಹಾಸನದ ಮಹಿಳೆಯ ಹಿಂದೆ ಬಿದ್ದಿದ್ದನು. ಆದರೆ ಆಂಟಿ ಆತನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಳು. ಈ ವಿಚಾರಕ್ಕೆ ಈ ಹಿಂದೆ ಕೂಡ ಗಲಾಟೆ ನಡೆದಿದೆ ಎನ್ನಲಾಗಿದೆ. ತನ್ನ ವಿಳಾಸ ಬರೆಯದೇ ಈತ ಹಲವು ಬಾರಿ ಮಹಿಳೆಗೆ ಪತ್ರ , ವಸ್ತುಗಳನ್ನು ಕಳುಹಿಸಿದ್ದನು. ಆದರೆ ಇದ್ಯಾವುದಕ್ಕೂ ಮಹಿಳೆ ರಿಪ್ಲೈ ಮಾಡಲಿಲ್ಲ, ಇದರಿಂದ ರೊಚ್ಚಿಗೆದ್ದ ಯುವಕ ಮಿಕ್ಸರ್ ನಲ್ಲಿ ಸ್ಪೋಟಕ ಇಟ್ಟು ಕಳುಹಿಸಿದ್ದಾನೆ. ಆದರೆ ಈ ಸಲ ಬಂದ ಕೊರಿಯರ್ ಎಸೆಯದೇ ಮಹಿಳೆ ಪುನಃ ಅದನ್ನು ಕೊರಿಯರ್ ಶಾಪ್ ಗೆ ತಂದು ಕೊಟ್ಟಿದ್ದಾರೆ, ಹಾಗೂ ಇದನ್ನು ವಾಪಸ್ ಕಳುಹಿಸಲು ಹೇಳಿದ್ದಾರೆ. ಆದರೆ ಕೊರಿಯರ್ ಅಂಗಡಿಯವರ 350 ರೂ ಶುಲ್ಕ ಕೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ಏನಾದರೂ ಮಾಡಿಕೊಳ್ಳಿ ನೀವು ಎಂದು ಕೊರಿಯರ್ ಅಲ್ಲೇ ಬಿಟ್ಟು ತೆರಳಿದ್ದಾಳೆ. ನಂತರ ಕೊರಿಯರ್ ಅಂಗಡಿಯವ ಇದರಲ್ಲಿ ಏನಿದೆ ಎಂದು ಕುತೂಹಲದಿಂದ ಪಾರ್ಸೆಲ್ ಬಿಚ್ಚಿದ್ದಾನೆ, ಆಗ ಮಿಕ್ಸಿ ಸ್ಪೋಟಗೊಂಡಿದೆ.
ಘಟನೆ ಕುರಿತು ಎಸ್.ಪಿ ಸ್ಪಷ್ಟನೆ
ಘಟನೆ ಕುರಿತು ಹಾಸನ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದು, ಘಟನೆಗೂ ಉಗ್ರರ ಕೃತ್ಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.ಮಿಕ್ಸಿ ಬ್ಲಾಸ್ಟ್ ಆಗಿ ಶಶಿಕುಮಾರ್ ಎಂಬುವವರಿಗೆ ಗಾಯಗಳಾಗಿದೆ. ಸದ್ಯ ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ. ಘಟನೆ ನಡೆದಾಗ ಗೊಂದಲ ಸೃಷ್ಟಿಯಾಗಿದೆ ಅಷ್ಟೇ, ಇದು ಯಾವುದೇ ಉಗ್ರಗಾಮಿಗಳಿಗೆ ಸಂಬಂಧಿಸಿದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಸ್ಪೋಟದ ಹಿಂದೆ ಯಾವುದೇ ಉಗ್ರರ ಕೃತ್ಯ ಇಲ್ಲ, ಉಗ್ರ ಕೃತ್ಯಕ್ಕೆ ನಡೆಸುವ ರೀತಿ ಯಾವುದೇ ತಂತ್ರಜ್ಞಾನವನ್ನು ಬಳಸಿಲ್ಲ, ಇದು ವೈಯಕ್ತಿಕ ದ್ವೇಷದಿಂದ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.