ಬೆಂಗಳೂರು: ಹೊಸ ವರ್ಷಾಚರಣೆಗೆ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಂತೆ ಖಾಕಿ ಕಣ್ಗಾವಲು ಹಾಕಿದೆ.
BIGG NEWS : ಧಾರವಾಡದಲ್ಲಿ 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!
ಹೊಸ ವರ್ಷದಿಂದ ಕುಡಿದು, ಕುಣಿದು ಕುಪ್ಪಳಿಸುವ ಜನರೇ ಹೆಚ್ಚು. ಕುಡಿದ ಮತ್ತನಲ್ಲಿ ಏನ್ ಮಾಡ್ತಾರೆ ಅಂತಾ ಅವರಿಗೆ ತಿಳಿದಿರಲ್ಲ. ಹಾಗಾಗಿ ಅವರಿಗೆ ಪೊಲೀಸ್ ಇಲಾಖೆ ಒಂದು ಸೂಕ್ತ ವ್ಯವಸ್ಥೆ ಕಲಿಸಲಾಗಿದೆ.
ಹೌದು ಡಿಸೆಂಬರ್ 31ರ ರಾತ್ರಿ ಹೊಸ ವರ್ಷಾಚರಣೆಯಲ್ಲಿ ಭಾಗಿಯಾಗಿ ಕುಡಿದು ಟೈಟಾದವರಿಗೆ ಪೊಲೀಸ್ ಇಲಾಖೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದೆ.
ಯುವಕ, ಯುವತಿ ಯಾರೇ ಕುಡಿದು ಟೈಟಾದ್ರೆ ಅವರ ಸುರಕ್ಷತೆಗಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದ್ದು, ಈ ಆ್ಯಂಬುಲೆನ್ಸ್ ಮೂಲಕವೇ ಅವರನ್ನು ಮನೆಗೆ ತಲುಪಿಸಲಾಗುತ್ತೆ. ಡಿಸೆಂಬರ್ 31ರ ರಾತ್ರಿ ಮಾತ್ರ ಈ ಸೇವೆ ಇರಲಿದೆ.ಈ ಮೂಲಕ ಆಗ್ನೇಯ ವಿಭಾಗ ಡಿಸಿಪಿ ಸಿಕೆ ಬಾಬಾ ರವರು ಮತ್ತೊಂದು ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆಗ್ನೇಯ ವಿಭಾಗದಲ್ಲಿ ಪಾರ್ಟಿಪ್ರಿಯರ ಸೇಫ್ಟಿಗೆ ಆ್ಯಂಬುಲೆನ್ಸ್ ಸೇವೆಗೆ ಪ್ಲಾನ್ ನಡೆದಿದೆ.