ಬೆಂಗಳೂರು : ಡಿಸೆಂಬರ್ 28 ರ ಇಂದಿನಿಂದ ಜನವರಿ 02ವರೆಗೆ ಬೆಂಗಳೂರಿನಲ್ಲಿ ಮೈ ಕೊರೆವ ಚಳಿಯ ವಾತಾವರಣ ನಿರ್ಮಾಣವಾಗಲಿ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಮುನ್ಸೂಚನೆ ನೀಡಿದೆ.
Good News : ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ವಸತಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ : ಸಚಿವ ವಿ.ಸೋಮಣ್ಣ
ಹವಮಾನ ವೈಪರೀತ್ಯದಿಂದ ಮತ್ತೆ ದಟ್ಟ ಮಂಜು ಸಹಿತ ಚಳಿ ಹೆಚ್ಚಾಗಲಿದೆ. ಡೆಡ್ಲಿ ಕೊರೊನಾ ಹೆಚ್ಚಳ ಬೆನ್ನಲ್ಲೆ ಚಳಿ ಹೆಚ್ಚಾಗೋದ್ರಿಂದ ಸಿಟಿ ಜನರು ಆರೋಗ್ಯದ ಬಗ್ಗೆ ಮತ್ತಷ್ಟು ಎಚ್ಚರವಹಿಸೋದು ಮುಖ್ಯವಾಗಿದೆ. ಚಳಿಗೆ ಬೆಚ್ಚಗಿನ ಬಟ್ಟೆ ಜೊತೆಗೆ ಮಾಸ್ಕ್ ಧರಿಸುವುದು ಮತ್ತು ಹೊರಾಂಗಣ ಸಭೆ, ಸಮಾರಂಭಗಳಿಗೆ ಹೋಗುವುದನ್ನು ಆದಷ್ಟು ಕಡಿಮೆ ಮಾಡಿದರೆ ಉತ್ತಮ ಎಂದು ವೈದ್ಯರು ಸೂಚಿಸಿದ್ದಾರೆ.
ಕೆಲವು ಪ್ರದೇಶಗಳಲ್ಲಿ ಮಳೆಬೀಳುವ ಸಾಧ್ಯತೆಯೂ ಇದೆ. ಬಂಗಾಳಕೊಲ್ಲಿಯಲ್ಲಿ ನಿರ್ಮಾಣವಾಗಿದ್ದ ವಾಯುಭಾರ ಕುಸಿತ ಶ್ರೀಲಂಕಾ ಕರಾವಳಿ ಪ್ರದೇಶದಲ್ಲಿ ಸಾಗಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿದೆ. ಇದರ ಪರಿಣಾಮವಾಗಿ ಬೆಂಗಳೂರಿನಲ್ಲಿ ಕಳೆದ ಮೂರು ನಾಲ್ಕು ದಿನ ಜಡಿ ಮಳೆ ಸುರಿದಿತ್ತು. ಇಡಿ ದಿನ ಮೋಡ ಕವಿದ ವಾತಾವರಣ ಕಂಡು ಬಂದಿದ್ದು, ಈಗಲೂ ಚಳಿ ಹಾಗೂ ತುಂತುರು ಮಳೆ ವಾತಾವರಣ ಮುಂದುವರಿದಿದೆ.
ಮಂಗಳವಾರ ಸಹ ಯಲಹಂಕ, ಹೆಬ್ಬಾ ಳ, ಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ವಿಜಯನಗರ, ಹಂಪಿನಗರ, ಹೂಡಿ, ಮಹದೇವಪುರ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ತುಂತುರು ಮಳೆ ಬಿದ್ದಿದೆ. ಈ ಮಳೆಯು ಮುಂದಿನ 24ಗಂಟೆ ಬಳಿಕ ಸಂಪೂರ್ಣವಾಗಿ ತಗ್ಗುವ ಸಾಧ್ಯತೆ ಇದೆ.
ಡಿಸೆಂಬರ್ 28ರಿಂದ ಜನವರಿ 02ವರೆಗೆ ಬೆಂಗಳೂರಿನಲ್ಲಿ ಮೈ ಕೊರೆವ ಚಳಿಯ ವಾತಾವರಣ ನಿರ್ಮಾಣವಾಗಲಿದೆ. ಜನವರಿ 2 ಹೊತ್ತಿಗೆ ಕನಿಷ್ಠ ತಾಪಮಾನ 14-15ಡಿಗ್ರಿ ಸೆಲ್ಸಿಯಸ್ವರೆಗೆ ಇಳಿಕೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.