ಉತ್ತರ ಪ್ರದೇಶ : ನೋಯ್ಡಾದಲ್ಲಿ ಮನೆಯ ಕೆಲಸದಾಕೆಯನ್ನು ಮಹಿಳೆಯೊಬ್ಬರು ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಲಿಯೋ ಕೌಂಟಿ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ಶೆಫಾಲಿ ಕೌಲ್ ಎಂಬುವವರ ವಿರುದ್ಧ ದೂರು ದಾಖಲಾಗಿದೆ.
ಹಲ್ಲೆಗೊಳಗಾದ ಮನೆಗೆಸದಾಕೆಯನ್ನು ಅನಿತಾ(20) ಎಂದು ಗುರುತಿಸಲಾಗಿದೆ.ಮಹಿಳೆಯ ಹಲ್ಲೆ ನಡೆಸಿರುವ ವಿಡಿಯೋ ಕಟ್ಟಡದ ಲಿಫ್ಟ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
#WATCH | Domestic help beaten by a woman in Cleo County society, Noida
On basis of a man's complaint that his daughter was beaten by Shephali Kaul in whose house she worked, case registered at Phase 3 PS. Action to be taken on basis of evidence:ADCP Central Noida
(CCTV visuals) pic.twitter.com/nduQADNzus
— ANI UP/Uttarakhand (@ANINewsUP) December 27, 2022
ಮಹಿಳೆಯು ಮನೆ ಕೆಲಸದಾಕೆಯನ್ನು ಬಲವಂತವಾಗಿ ಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಸಂತ್ರೆಸ್ತೆ ಹೊರಗೆ ಬರಲು ನಿರಾಕರಿಸಿದರೂ ಲೆಕ್ಕಿಸದೆ ಮಹಿಳೆ, ಆಕೆಯನ್ನು ಲಿಫ್ಟ್ನಿಂದ ಕೆಳಗಿಳಿಸಲು ಬಲವಂತವಾಗಿ ಎಳೆದಾಡುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಹಲ್ಲೆಗೊಳಗಾದ ಮಹಿಳೆಯ ತಂದೆ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸೆಂಟ್ರಲ್ ನೋಯ್ಡಾದ ಎಡಿಸಿಪಿ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ (IPC) ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಹಂತ 3 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
HEALTH TIPS: ಊಟ ಮಾಡುವಾಗ ನೀರು ಕುಡಿಯುವುದು ಆರೋಗ್ಯಕ್ಕೆ ಹಾನಿಕರ : ಇದರಿಂದಾಗುವ ಅನಾನೂಕೂಲಗಳ ಬಗ್ಗೆ ತಿಳಿಯಿರಿ
BIGG NEWS : ಜಗತ್ತಿಗೆ ಮತ್ತೆ ಕಂಟಕವಾಗಲಿದ್ಯಾ ಚೀನಾ ; 3 ವರ್ಷದ ಬಳಿಕ ‘ನಿರ್ಬಂಧ’ ಸಡಿಲ, ‘ಅಂತರಾಷ್ಟ್ರೀಯ ಗಡಿ’ ಓಪನ್