ಬೆಂಗಳೂರು : ಕರ್ನಾಟಕದೊಂದಿಗಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆ ನಿರ್ಣಯವನ್ನ ಅಂಗೀಕರಿಸಿದ್ದಕ್ಕೆ ಪ್ರತಿಕ್ರಿಯಿಸಿದ ದಕ್ಷಿಣ ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ, ನಾನು ಒಂದಿಂಚು ಭೂಮಿಯನ್ನ ಸಹ ಬಿಟ್ಟುಕೊಡುವುದಿಲ್ಲ ಎಂದು ಹೇಳಿದರು. ಏಕನಾಥ್ ಶಿಂಧೆ ಸರ್ಕಾರವು ಇಂತಹ ಕ್ರಮಗಳಿಗೆ ಮೊರೆ ಹೋಗುತ್ತಿದೆ. ಯಾಕಂದ್ರೆ, ಈ ಪ್ರಕರಣದಲ್ಲಿ ಅವರ ವಾದಗಳು ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿದ್ದು, ತುಂಬಾ ದುರ್ಬಲವಾಗಿದೆ ಎಂದು ಹೇಳಿದರು.
“ಕರ್ನಾಟಕದ ಒಂದಿಂಚೂ ಭೂಮಿಯನ್ನ ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವುದಿಲ್ಲ. ಕರ್ನಾಟಕ ಸರ್ಕಾರವು ಪ್ರತಿ ಇಂಚು ಭೂಮಿಯನ್ನ ರಕ್ಷಿಸಲು ಸಂಪೂರ್ಣವಾಗಿ ಬದ್ಧವಾಗಿದೆ. ರಾಜ್ಯಗಳ ಪುನರ್ವಿಂಗಡಣಾ ಕಾಯ್ದೆ, 1956ರ ಆಧಾರದ ಮೇಲೆ ರಾಜ್ಯಗಳನ್ನ ಸಂಘಟಿಸಲಾಯಿತು. ಸುಪ್ರೀಂಕೋರ್ಟ್ ಮುಂದೆ ಬಾಕಿ ಉಳಿದಿರುವ ಅವರ ಪ್ರಕರಣವು ತುಂಬಾ ದುರ್ಬಲವಾಗಿರುವುದರಿಂದ ಮಹಾರಾಷ್ಟ್ರದ ರಾಜಕಾರಣಿಗಳು ಇಂತಹ ಕೆಲಸಗಳನ್ನ ಮಾಡುತ್ತಿದ್ದಾರೆ ” ಎಂದು ಸಿಎಂ ಹೇಳಿದರು.
ಅಂದ್ಹಾಗೆ, ಮಹಾರಾಷ್ಟ್ರ ವಿಧಾನಸಭೆ ಮಂಗಳವಾರ ಕರ್ನಾಟಕದೊಂದಿಗಿನ ವಿವಾದಾತ್ಮಕ ಗಡಿ ಪ್ರದೇಶದಲ್ಲಿ ವಾಸಿಸುವವರಿಗೆ ಒಗ್ಗಟ್ಟನ್ನ ವ್ಯಕ್ತಪಡಿಸುವ ನಿರ್ಣಯವನ್ನ ಅಂಗೀಕರಿಸಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಈ ನಿರ್ಣಯವನ್ನು ಮಂಡಿಸಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಭಾಲ್ಕಿ, ಬೀದರ್ ನಗರಗಳು ಮತ್ತು ಮಹಾರಾಷ್ಟ್ರ ಕರ್ನಾಟಕದ 865 ಮರಾಠಿ ಭಾಷಿಕ ಗ್ರಾಮಗಳನ್ನ ಯಾವುದೇ ಪರಿಸ್ಥಿತಿಯಲ್ಲಿ ಸೇರಿಸಲು ಸರ್ವೋಚ್ಚ ನ್ಯಾಯಾಲಯದಲ್ಲಿ ಎಲ್ಲಾ ಅಗತ್ಯ ಕಾನೂನು ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು ಸಿಎಂ ಮಂಡಿಸಿದ ನಿರ್ಣಯದಲ್ಲಿ ತಿಳಿಸಲಾಗಿದೆ.
Weight Gain Tips: ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಹಾಲು ಪ್ರಯೋಜನಕಾರಿ : ಈ ಮೂರು ವಸ್ತುಗಳೊಂದಿಗೆ ಸೇವಿಸಿ
ದೇಶದ 142 ಕೋಟಿ ಜನಸಂಖ್ಯೆಯಲ್ಲಿ ‘ಕಾರು’ ಹೊಂದಿರೋ ಜನರೆಷ್ಟು ಗೊತ್ತಾ.? ; ಕಹಿ ಸತ್ಯ ಬಿಚ್ಚಿಟ್ಟ ‘ಆನಂದ್ ಮಹೀಂದ್ರಾ’
Weight Gain Tips: ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಹಾಲು ಪ್ರಯೋಜನಕಾರಿ : ಈ ಮೂರು ವಸ್ತುಗಳೊಂದಿಗೆ ಸೇವಿಸಿ