ಕೆಎನ್ಎನ್ ಡಿಜಿಟಲ್ ಡೆಸ್ಕ್ : ಮನೆಗಳಲ್ಲಿ ಮೀನುಗಳನ್ನು ಸಾಕುವುದು ಕೆಲವರಿಗೆ ಅಭ್ಯಾಸವಾಗಿರುತ್ತದೆ. ಇದರ ಜೊತೆಗೆ ಮೀನುನನ್ನು ಸಾಕಿದ್ರೆ ಮನೆಯಲ್ಲಿ ಸಂತೋಷ, ಸಮೃದ್ಧಿ ತರುತ್ತದೆ ಎಂಬ ನಂಬಿಕೆಯು ಇದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ವಿಶೇಷ ಮೀನಿದೆ, ಅದನ್ನು ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಕುಟುಂಬದಲ್ಲಿ ಪ್ರಗತಿ ಹೆಚ್ಚುಸತ್ತದೆಂತೆ. ಇಲ್ಲಿದೆ ಹೆಚ್ಚಿನ ಮಾಹಿತಿ.
ಅರೋವಾನಾ ಮೀನು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅರೋವಾನಾ ಮೀನುಗಳನ್ನು ಇಡಬೇಕು. ಇದು ಮನೆಯ ಸದಸ್ಯರು ಪ್ರಗತಿಯನ್ನು ಸಾಧಿಸಲು ಹೆಚ್ಚು ಅದೃಷ್ಟಕರವಂತೆ. ಮನೆಯಲ್ಲಿ ಈ ಮೀನುಗಳಿದ್ದರೆ ಮನೆಯಲ್ಲಿ ಶಾಂತಿ, ಆರೋಗ್ಯ ,ನೆಮ್ಮದಿ ನೆಲೆಸಿರುತ್ತದೆ ಎಂದು ಹೇಳಲಾಗುತ್ತದೆ. ಈ ಮೀನನ್ನು ನಿರ್ದಿಷ್ಟ ದಿಕ್ಕಿನಲ್ಲಿ ಇಡುವುದರಿಂದ ಮಾತ್ರ ಕುಟುಂಬಕ್ಕೆ ಒಳ್ಳೆಯದು.
ಪೂರ್ವ ದಿಕ್ಕಿನಲ್ಲಿ ಇರಿಸಬೇಕು
ಕೆಲವರಿಗೆ ಮನೆಯಲ್ಲಿ ಮೀನು ಸಾಕಲು ಸಾಧ್ಯವಾಗದಿದ್ದಾಗ, ಅರೋವಾನಾ ಮೀನಿನ ವಿಗ್ರಹವನ್ನು ಮನೆಗೆ ತರಬಹುದು. ಈ ಮೀನಿನ ಮೂರ್ತಿಯ ಬಾಯಲ್ಲಿ ನಾಣ್ಯ ಇರಬೇಕು. ಈ ವಿಗ್ರಹವನ್ನು ಮನೆಯ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಕು. ಆಗ ಮಾತ್ರ ಅದು ಕುಟುಂಬದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಅಕ್ವೇರಿಯಂನಲ್ಲಿ ಮೀನನ್ನು ಹಾಕಿ ಪೂರ್ವ ದಿಕ್ಕಿನಲ್ಲಿ ಮಾತ್ರ ಇಡಬೇಕು.
ಇನ್ನೊಂದು ವಿಶೇಷವೆಂದರೆ ಭೂಕಂಪ ಸಂಭವಿಸಿದಾಗ ಮೊದಲು ಈ ಮೀನುಗಳಿಗೆ ಅನುಭವವಾಗುತ್ತದೆಯಂತೆ.
BREAKING NEWS : ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕಲಾಪ ಮುಂದೂಡಿಕೆ |Belagavi Winter Session
BIGG NEWS : ಬೆಳಗಾವಿ ಗಡಿ ವಿವಾದ : ‘ಮಹಾ’ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ‘ಖಂಡನಾ ನಿರ್ಣಯ’ ಅಂಗೀಕಾರ
ರಾಜ್ಯದ ಒಂದು ಹಳ್ಳಿಯನ್ನೂ ನಾವು ಬಿಟ್ಟುಕೊಡುವುದಿಲ್ಲ : ‘ಮಹಾ’ ಸರ್ಕಾರದ ವಿರುದ್ಧ ಡಿಕೆಶಿ ಗುಡುಗು