ಬೆಳಗಾವಿ : ಇಂದು ಅಧಿವೇಶನದಲ್ಲಿ ಹಲವು ಮಹತ್ವದ ಚರ್ಚೆ, ಹಲವು ಮಸೂದೆ ಮಂಡನೆಯಾಗಿದ್ದು, ಇದೀಗ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕಲಾಪ ಮುಂದೂಡಿಕೆ ಮಾಡಲಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನಸಭಾ ಕಲಾಪ ಮುಂದೂಡಿಕೆ ಮಾಡಿದ್ದಾರೆ. ಇನ್ನೂ, ಬೆಳಗಾವಿ ಗಡಿ ವಿವಾದದ ಬಗ್ಗೆ ಮಹಾರಾಷ್ಟ್ರದಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಅಧಿವೇಶನದಲ್ಲಿ ಸರ್ವಾನುಮತದಿಂದ ಖಂಡನಾ ನಿರ್ಣಯ ಅಂಗೀಕರಿಸಲಾಯಿತು. ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಖಂಡನಾ ನಿರ್ಣಯ ಮಂಡಿಸಿದರು, ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಿದರು.ನಾವು ನಮ್ಮ ರಾಜ್ಯದ ಒಂದಿಂಚೂ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳುತ್ತೇವೆ, ಆದ್ರೆ ಮಹಾರಾಷ್ಟ್ರದವರುದ್ದು, ರಾಜಕೀಯ ಕಾರಣಕ್ಕೆ ಗಡಿ ವಿವಾದ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರಾಜ್ಯದ ಒಂದು ಹಳ್ಳಿಯನ್ನೂ ನಾವು ಬಿಟ್ಟುಕೊಡುವುದಿಲ್ಲ : ‘ಮಹಾ’ ಸರ್ಕಾರದ ವಿರುದ್ಧ ಡಿಕೆಶಿ ಗುಡುಗು