ಪ್ರಯಾಗ್ ರಾಜ್: ವಿಡಿಯೋ ಮಾಡಲು ಹೈಟೆನ್ಷನ್ ವಿದ್ಯುತ್ ಕಂಬದ ಮೇಲೆ ಹತ್ತಿದ ಯುವಕನಿಗೆ ವಿದ್ಯುತ್ ಸ್ಪರ್ಶದಿಂದ ಗಂಭೀರ ಸುಟ್ಟ ಗಾಯಗಳಾಗಿರುವ ಘಟನೆ ಪ್ರಯಾಗ್ರಾಜ್ನಲ್ಲಿ ನಡೆದಿದೆ. ವೈರಲ್ ಆಗಿರೋ ವೀಡಿಯೊದಲ್ಲಿ, ವ್ಯಕ್ತಿಯು ತನ್ನ ದೇಹದವನ್ನು ನೆಲದ ಮೇಲೆ ಒಡ್ಡಿಕೊಂಡಿದ್ದು, ಈ ವೇಳೆ ಆತನ ಮೈನಿಂದ ಹೊಗೆ ಬರುವುದನ್ನು ನೋಡಬಹುದಾಗಿದೆ.
ಹೌದು, ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಡಿಯೋ ಮಾಡಲು ರೈಲ್ವೆ ಹಳಿಗಳ ಬಳಿ ಹೈಟೆನ್ಷನ್ ವಿದ್ಯುತ್ ಕಂಬವನ್ನು ಹತ್ತಿದ ನಂತರ ವ್ಯಕ್ತಿಯೊಬ್ಬರು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿದ್ಯುತ್ ಸ್ಪರ್ಶಿಸಿದ ನಂತರ ವ್ಯಕ್ತಿಯು ನೆಲದ ಮೇಲೆ ಮಲಗಿರುವ ಮತ್ತು ಅವನ ದೇಹದಿಂದ ಹೊಗೆ ಹೊರಸೂಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಉತ್ತರ ಮಧ್ಯ ರೈಲ್ವೆ ಭದ್ರತಾ ಇಲಾಖೆ ಈ ವಿಷಯವನ್ನು ಪರಿಶೀಲಿಸುವಂತೆ ಆರ್ಪಿಎಫ್ ಮತ್ತು ಜಿಆರ್ಪಿಯನ್ನು ಕೇಳಿದೆ.